ಸಮಾಜ ಸೇವೆಯಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚೆನ್ನೈ ಯೂನಿವರ್ಸಿಟಿ ವತಿಯಿಂದ ಡಾಕ್ಟರೆಟ್ ಪದವಿ, ದುಬೈ ಗಡಿನಾಡ ಸಾಂಸ್ಕೃತಿಕ ಅಕಾಡಮಿ (ರಿ)ವತಿಯಿಂದ ಯೂತ್ ಐಕಾನ್ ಅವಾರ್ಡ್ ಸೇರಿದಂತೆ ನೂರಾರು ಸಂಘ ಸಂಸ್ಥೆಗಳಿಂದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದು ಬದ್ರಿಯ ಜುಮ್ಮಾ ಮಸ್ಜಿದ್ (ರಿ)ಮಲ್ಲಾರು-ಮಜೂರು ಅಧ್ಯಕ್ಷರಾಗಿ ಕಳೆದ 2 ವರ್ಷದಲ್ಲಿ ಮಸ್ಜಿದ್ ನ ಸಮಗ್ರ ಅಭಿವೃದ್ಧಿ ಮಾಡಿ ಅಭಿವೃದ್ಧಿ ಹರಿಕಾರ, ಅಭಿವೃದ್ಧಿ ರತ್ನ ಎಂಬ ಬಿರುದು ಪಡೆದು ಹಾಗೂ ಸರ್ವ ದರ್ಮಿಯರ ನೋಡಬನ್ನಿ ನಮ್ಮ ಮಸೀದಿ ಕಾರ್ಯಕ್ರಮ ಮಾಡಿ 5000 ಕ್ಕೂ ಹೆಚ್ಚಿನ ಜನ ಮಸ್ಜಿದ್ ವೀಕ್ಷಣೆ ಮಾಡಿದ್ದು ಉಡುಪಿ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಲವಾರು ಸೌಹಾರ್ದತೆಯ ಕಾರ್ಯಕ್ರಮ ನೀಡಿ ಉತ್ತಮ ಸಾರಾಂಶ ಕೊಟ್ಟು ಜನಮೆಚ್ಚುಗೆ ಪಡೆದ ಸಮಾಜ ಸೇವಕರು ಉದ್ಯಮಿಗಳು ಆಗಿರುವ ಡಾ.ಎಂ ಫಾರೂಕ್ ಚಂದ್ರನಗರ ಇವರಿಗೆ ಸುನ್ನಿ ಯುವ ಸಂಘ, ಕೆ.ಎಂ.ಜೆ, ಎಸ್.ಎಸ್ ಎಫ್ ಮಜೂರು ಘಟಕದ ವತಿಯಿಂದ ಸಿರಾಜುಮ್ಮನ್ನೀರ್ ಮಿಲಾದ್ ಫೆಸ್ಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಿ.ಜೆ.ಎಂ ಖತೀಬರಾದ ಅಬ್ದುಲ್ ರಶೀದ್ ಸಖಾಫಿ ಹಾಗೂ ಸಯ್ಯದ್ ಮುಹಮ್ಮದ್ ಶಹೀರ್ ಅಲ್ ಹಿಕಮಿ ಅಲ್ ಹಾಶಿಮಿ ತಂಗಲ್ ರವರು ಸನ್ಮಾನಿಸಿ ಗೌರವಿಸಿದರು
ಈ ಸಂದರ್ಭದಲ್ಲಿ ಸುನ್ನಿ ಯುವ ಸಂಘ ಮಜೂರು ಘಟಕದ ಅಧ್ಯಕ್ಷರಾದ ಕೆ. ಎಂ ಮೊಹಮ್ಮದ್, ಪ್ರದಾನ ಕಾರ್ಯದರ್ಶಿ ರಿಯಾಜ್ ಉಸ್ತಾದ್ ,ಕೋಶಾಧಿಕಾರಿ ಅಶ್ರಫ್ ಕರಂದಾಡಿ ಹಾಗೂ ಎಸ್.ವೈ.ಎಸ್ ಹಾಗೂ ಕೆ.ಎಂ.ಜೆ ಮತ್ತು ಎಸ್.ಎಸ್.ಎಫ್ ಪದಾಧಿಕಾರಿಗಳು, ಉಸ್ತಾದರುಗಳು, ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಕಾರ್ಯಕ್ರಮ ನಿರ್ವಹಣೆ ಎಂ.ಕೆ ಇಬ್ರಾಹಿಂ ಕರಂದಾಡಿ ನಿರ್ವಹಿಸಿದರು

