ಯುವವಾಹಿನಿ( ರಿ) ಕುಪ್ಪೆಪದವು ಎಡಪದವು ಘಟಕ: ಆನ್ಲೈನ್ ಮಕ್ಕಳ ಮುದ್ದುಕೃಷ್ಣ ಫೋಟೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ

0
6

ಯುವವಾಹಿನಿ (ರಿ) ಕುಪ್ಪೆಪದವು ಎಡಪದವು ಘಟಕದ ವತಿಯಿಂದ ನಡೆದಿರುವ ಆನ್ಲೈನ್ ಮುದ್ದುಕೃಷ್ಣ ಫೋಟೋ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭವು ಕುಪ್ಪೆಪದವು ಶ್ರೀ ರಾಮಕೃಷ್ಣ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಾಹಿನಿಯ ಅಧ್ಯಕ್ಷರಾದ ಗೋಪಾಲ್ ಪೂಜಾರಿ( ಗಂಗಾಧರ ) ಎಡಪದವು ಇವರು ವಹಿಸಿಕೊಂಡು ನಮ್ಮ ಸಂಸ್ಥೆಯ ವತಿಯಿಂದ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ತುಂಬಾ ಸಂತೋಷದ ವಿಚಾರ ಇಂತಹ ಕಾರ್ಯಕ್ರಮ ನಡೆಸಲು ನಮ್ಮೆಲ್ಲ ಸದಸ್ಯರ ಪರಿಶ್ರಮದಿಂದ ಸಾಧ್ಯವಾಯಿತು. ಇನ್ನು ಮುಂದೆಯು ಈ ಭಾಗದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದರು. ಮುದ್ದುಕೃಷ್ಣ ಫೋಟೋ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಅನ್ಸ್ ಎ ಕೋಟ್ಯಾನ್ ಕುರಿಯಾಲ, ದ್ವಿತೀಯ ಬಹುಮಾನ ಪೂರ್ವಿತ್ ಎ ಕುಲವೂರು ತೃತೀಯ ಬಹುಮಾನ ಚಿರoಶ್ ಪಿ ಕುಲಾಲ್ ವಾರಟಿಲು ಇವರು ಪಡೆದುಕೊಂಡರು ಹಾಗು ಕಶ್ವಿ ಸುಂಕದಕಟ್ಟೆ. ರಿಯಾನ್ಸ್ ಸಿ ಆರ್. ಧಾತ್ರಿ ಕೆ ಕೋಟ್ಯಾನ್ ಅಳಿಕೆಪದವು ಇವರು ಪಡೆದುಕೊಂಡರು. ಮತ್ತು ಮುದ್ದುಕೃಷ್ಣ ಫೋಟೋ ಸ್ಪರ್ಧೆಗೆ ಸಹಕಾರ ನೀಡಿದ ಶ್ರೀ ಬ್ರಾಮರಿ. ಮೊಬೈಲ್ಸ್ ಮಾಲಕರಾದ ಶ್ರೀ ವಿಜೀತ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶ್ರೀ ಸಂಜೀವ ಶ್ರೀನಿಕೇತನ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಧರ ಪೂಜಾರಿ. ಉಪಾಧ್ಯಕ್ಷರಾದ ರಜನಿಕುಂದರ್. ಕೋಶಾಧಿಕಾರಿ ಶಕುಂತಳಾ ಮಾಜಿ ಅಧ್ಯಕ್ಷರುಗಳಾದ ಅಜಯ್ ಅಮೀನ್. ಸತೀಶ್ ಕೆಎಂ ಜಗದೀಶ್ ದುರ್ಗಾಕೋಡಿ. ಸೌಮ್ಯ ಕೋಟ್ಯಾನ್, ಅಕ್ಷಿತ್ ಕುಮಾರ್ ಕಲೆ ಮತ್ತು ಸಾಂಸ್ಕೃತಿಕ ನಿರ್ದೇಶಕಿ ಶ್ರೀಮತಿ ಸಂಜಾತ. ಮಾಧ್ಯಮ ಮತ್ತು ಪ್ರಚಾರ ನಿರ್ದೇಶಕ ನಿತಿನ್. ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಘಟಕದ ಕಾರ್ಯದರ್ಶಿ ಸಂತೋಷ್ ಬೊಳಿಯ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು,