ಉಪ್ಪೂರು ನರ್ನಾಡು ಮದಗ ಲೇಔಟ್‌ನಲ್ಲಿ ಅದ್ದೂರಿ ಗಣೇಶೋತ್ಸವ

0
11

ಉಪ್ಪೂರು: ನಾಗರಿಕ ವೇದಿಕೆ ನರ್ನಾಡು ಮದಗ ಲೇಔಟ್ ಉಪ್ಪೂರು ಇಲ್ಲಿನ 4 ನೆಯ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ದಿನಾಂಕ 14-09-2026 ರಂದು ಗಣೇಶ ವಿಗ್ರಹವನ್ನು ವಿಶಿಷ್ಟವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಹೊತ್ತು ತಂದು ಗಣೇಶ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ವಿಜೃಂಭಣೆಯಿಂದ ಪೂಜೆಗೆ ಚಾಲನೆ ನೀಡಲಾಯಿತು.
ನಾಗರಿಕ ವೇದಿಕೆ ಗೌರವಾಧ್ಯಕ್ಷರು ಹರೀಶ್ ಅಮೀನ್ ದಂಪತಿಗಳು ಶ್ರೀ ದೇವರ ಗಣಯಾಗ ಸೇವೆ ಅರ್ಪಿಸಿದರು.

ಬೆಳಿಗ್ಗೆ ಗಣೇಶ ಹಬ್ಬದ ವೇದಿಕೆಯಲ್ಲಿ ಸ್ಥಳೀಯರ ಭಜನೆ ಮತ್ತು ಮಧ್ಯಾನ ಸ್ಥಳೀಯ ಲೇಔಟ್ ಪ್ರತಿಬೇಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಂಜೆ 4.30 ರಿಂದ ನಡೆದ ಧಾರ್ಮಿಕ ಸಭೆಯನ್ನು ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಡಾ ಕೃಷ್ಣಪ್ರಸಾದ್, ಪ್ರಸಾದ್ ನೇತ್ರಾಲಯ ಉಡುಪಿ ಇವರು ನಾಗರಿಕ ವೇದಿಕೆ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಶ್ರೀ ಫ್ರ್ಯಾಂಕಿ ಡಿಸೋಜ, ಕೊಳಲಗಿರಿ ಜಿಲ್ಲಾಧ್ಯಕ್ಷರು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಶ್ರೀ ಬಾಲಕೃಷ್ಣ ಶೆಟ್ಟಿ ನಿಟ್ಟೂರು ಮಾಜಿ ನಗರಸಭಾ ಸದಸ್ಯರು ಕಕ್ಕುಂಜೆ ವಾರ್ಡ್, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಬೀಡಿನಗುಡ್ಡೆ ರುದ್ರಭೂಮಿ ಯಲ್ಲಿ ಶವಸ್ಕಾರ ಸೇವೆ ಮಾಡುವ ಶ್ರೀಮತಿ ವನಜಾ ಪೂಜಾರ್ತಿ, ಸ್ಥಳೀಯ ದಾನಿಗಳಾದ ಶ್ರೀಮತಿ ರತ್ನ ಬಾಬು ಪೂಜಾರಿ ಮದಗ ಲೇಔಟ್ ಉಪ್ಪೂರು, ನಾಗರಿಕ ವೇದಿಕೆ ಅಧ್ಯಕ್ಷರಾದ ಶ್ರೀ ಶರತ್ ಪೂಜಾರಿ, ಗೌರವ ಅಧ್ಯಕ್ಷರಾದ ಶ್ರೀ ಹರೀಶ್ ಅಮೀನ್ ಉಪಸ್ಥಿತರಿದ್ದರು.

ನಿತ್ಯಾನಂದ ಒಳಕಾಡು ಮತ್ತು ವನಜಾ ಪೂಜಾರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉತ್ತಮ ಅಂಕ ಗಳಿಸಿದ ಲೇಔಟ್ ನ ಇಬ್ಬರು ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಿ ಪುರಸ್ಕರಿಸಲಾಯಿತು.
ನಾಗರಿಕ ವೇದಿಕೆ ಕಾರ್ಯದರ್ಶಿ ಚೆನ್ನಕೇಶವ ಭಟ್ ಸ್ವಾಗಾರ್ಥಿಸಿದರು, ಗೌರವ ಅಧ್ಯಕ್ಷ ಹರೀಶ್ ಅಮೀನ್ ಪ್ರಸ್ತಾವನೆಗೈದರು , ಶ್ರೀಮತಿ ಸುಜಾತ ಶೇಟ್ ವಂದಿಸಿದರು. ಶ್ರೀಮತಿ ವಾಣಿಶ್ರೀ ಗೋವಿಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ನಾಗರಿಕ ವೇದಿಕೆ ಗಣೇಶೋತ್ಸವಕ್ಕೆ ಉಡುಪಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣ, ಮಾಜಿ ಶಾಸಕರಾದ ಶ್ರೀ ರಘುಪತಿ ಭಟ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಸಂಜೆ 7 ರಿಂದ ಲೇಔಟ್ ಪರಿಸರದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿಯನ್ನು ಜಲಸ್ತಂಬನ ಮಾಡಲಾಯಿತು.