ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ಸಮಿತಿ ವತಿಯಿಂದ ಇಂಜಿನಿಯರ್ ದಿನಾಚರಣೆಯ ಪ್ರಯುಕ್ತ ತುಳುಪರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ತುಳುನಾಡು ಒಕ್ಕೂಟ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಸಿವಿಲ್ ಇಂಜಿನಿಯರ್ ಶೈಲೇಶ್ ಆರ್.ಜೆ. ಅವರನ್ನು ಸನ್ಮಾನಿಸಲಾಯಿತು.
ಸಮಾಜಮುಖಿ ಕಾರ್ಯಗಳಲ್ಲಿ ಹಾಗೂ ತುಳು ಭಾಷೆ, ಸಂಸ್ಕೃತಿ ಮತ್ತು ಹಕ್ಕುಗಳ ಪರವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಬೆಳ್ತಂಗಡಿ ವಲಯ ಸಮಿತಿಯ ವತಿಯಿಂದ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಜಿಲ್ಲಾ ಸಮಿತಿ ಸದಸ್ಯೆ ಹಾಗೂ ವಲಯ ಸಮಿತಿ ಮಾಜಿ ಅಧ್ಯಕ್ಷೆ ಶಾಂಭವಿ ಪಿ. ಬಂಗೇರ, ಹರೀಶ್ ಗಜಾನನ ಟೈಲರ್ ಹಾಗೂ ತಾಲೂಕು ಸಮಿತಿ ಉಪಾಧ್ಯಕ್ಷ ವಸಂತ ಸ್ವಾತಿ ಉಪಸ್ಥಿತರಿದ್ದರು.
ವಸಂತ ಸ್ವಾತಿ ಸ್ವಾಗತಿಸಿದರು. ಶಿವರಾಮ ಹೆಗ್ಡೆ ಧನ್ಯವಾದ ಸಲ್ಲಿಸಿದರು.

