ಹೆಬ್ರಿ:, ಈ ಶೈಕ್ಷಣಿಕ ಸಾಲಿನ ಪ್ರತಿಭಾವಂತ 10ನೇ ತರಗತಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಮೃತ ಭಾರತಿ ಟ್ರಸ್ಟ್ (ರಿ.), ಹೆಬ್ರಿ ವತಿಯಿಂದ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪಿಯು ಕಾಲೇಜು, ಹೆಬ್ರಿಯಲ್ಲಿ ಪಿಯುಸಿ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ವಿಶೇಷ ಅರ್ಹತಾ ವಿದ್ಯಾರ್ಥಿ ವೇತನ ಪ್ರವೇಶ ಪರೀಕ್ಷೆ – 2027-28 ಆಯೋಜಿಸಲಾಗಿದೆ.
ಪರೀಕ್ಷೆಯ ವಿವರಗಳು
ದಿನಾಂಕ: 25/10/2026,ಭಾನುವಾರ ಮತ್ತು 01/11/2026, ಭಾನುವಾರ
ಸಮಯ: ಬೆಳಿಗ್ಗೆ 10.00–12.00 / 11.00–1.00
80 ಬಹು ಆಯ್ಕೆ ಪ್ರಶ್ನೆಗಳು
ವಿಷಯಗಳು: ಗಣಿತ ಮತ್ತು ವಿಜ್ಞಾನ
➕ ಸರಿಯಾದ ಉತ್ತರಕ್ಕೆ 4 ಅಂಕಗಳು
➖ ತಪ್ಪಾದ ಉತ್ತರಕ್ಕೆ 1 ಅಂಕ ಕಡಿತ
ಪಠ್ಯಕ್ರಮ
IX ತರಗತಿಯ Mid-Term ನಂತರದ ಹಾಗೂ X ತರಗತಿಯ Mid-Term ವರೆಗೆ ಇರುವ ಪಠ್ಯಕ್ರಮವನ್ನು ಆಧರಿಸಿ ಬಹುಆಯ್ಕೆಯ ಪ್ರಶ್ನೆಗಳ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. State, CBSE ಮತ್ತು ICSE ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆಗಳ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ವಿದ್ಯಾರ್ಥಿವೇತನ
Top-3 ಅಂದರೆ ಅಗ್ರ 3 ಮೆರಿಟ್ ವಿದ್ಯಾರ್ಥಿಗಳಿಗೆ (State, CBSE ಪ್ರತ್ಯೇಕವಾಗಿ ಒಟ್ಟು 6)
100% ಉಚಿತ ಶಿಕ್ಷಣ
ಹಾಸ್ಟೆಲ್ ಅಥವಾ ಡೇ ಸ್ಕಾಲರ್ ದಾಖಲಾತಿ ಬಯಸುವರಿಗೂ ಅನ್ವಯ.
II Top -3 ಅಂದರೆ ನಂತರದ 3 ಮೆರಿಟ್ ವಿದ್ಯಾರ್ಥಿಗಳಿಗೆ(State, CBSE ಪ್ರತ್ಯೇಕವಾಗಿ- ಒಟ್ಟು 6) ಒಟ್ಟು ಶುಲ್ಕದಲ್ಲಿ 50% ರಿಯಾಯಿತಿ: ಹಾಸ್ಟೆಲ್ ಅಥವಾ ಡೇ ಸ್ಕಾಲರ್ ದಾಖಲಾತಿ ಬಯಸುವರಿಗೂ ಅನ್ವಯ .
ಒಟ್ಟಾರೆ 12 ವಿದ್ಯಾರ್ಥಿಗಳಿಗೆ (ಹಾಸ್ಟೆಲ್ ಅಥವಾ ಡೇ ಸ್ಕಾಲರ್ ಗೂ) ಹಾಗೂ ಕಾಲೇಜು ದಾಖಲಾತಿ ಮಾಡಲು ಇಚ್ಚಿಸುವ
ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗೂ ವಿಶೇಷ ವಿದ್ಯಾರ್ಥಿವೇತನ ನೀಡಲಾಗುವುದು.
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಶ್ರೇಷ್ಠತೆಯನ್ನು ಬೆಳೆಸುವುದರ ಜೊತೆಗೆ KCET, NEET ಮತ್ತು JEE, NDA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಅಡಿಪಾಯ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಅವಕಾಶದ ಸದುಪಯೋಗಕ್ಕಾಗಿ ತಕ್ಷಣ ನೊಂದಾಯಿಸಲು ಅಮೃತ ಭಾರತಿ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಹೆಸರು ನೋಂದಾಯಿಸಲು ಸಂಪರ್ಕಿಸಿ
📞 ಕಚೇರಿ: 7259003868 / 7259003869/99
📞 ಪ್ರಾಂಶುಪಾಲರು: 7259003867
📞 PRO: 8747808855
principalabpu@gmail.com
ವಂದನೆಗಳು

