ಮಂಗಳೂರಿನಲ್ಲಿ ಸ್ಟ್ರೆಂಥಾನ್ ಪರ್ಫಾರ್ಮೆನ್ಸ್ ಫಾರ್ಮೆಟ್

0
5


ವರದಿ ರಾಯಿ ರಾಜ ಕುಮಾರ್
ಮಂಗಳೂರಿನ ಐಕ್ಯ ಸ್ಪೋರ್ಟ್ಸ್ ಫೆಸಿಲಿಟಿ ಮೂಲಕ ಸೆಪ್ಟೆಂಬರ್ 20ರಂದು ಸ್ಟ್ರೆಂಥಾನ್ ಫೌಂಡಿಂಗ್ ಎಡಿಷನ್ ಪ್ರಾರಂಭ. ಇದು ಓಟ, ಶಕ್ತಿ, ಕ್ರಿಯಾತ್ಮಕ ಪ್ರದರ್ಶನವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲು ವಿನ್ಯಾಸಗೊಳಿಸಲಾದ ಮಾದರಿ. ಪುನರಾವರ್ತಿತ ಓಟದ ಪ್ರಯತ್ನ, ದೈಹಿಕ ಸಾಮರ್ಥ್ಯ ಪರೀಕ್ಷೆ, ಸಹಿಷ್ಣುತೆ, ಶಕ್ತಿ, ಚಲನೆ, ಕೆಲಸದ ಸಾಮರ್ಥ್ಯ, ಸ್ಥಿತಿ ಸ್ಥಾಪಕತ್ವ, ಬಲ ಗಳನ್ನು ಸಂಪೂರ್ಣ ಉಪಯೋಗಿಸಿಕೊಳ್ಳುವ ಕ್ಷಮತೆ ಮೂಡಲಿದೆ ಎಂದು ನಿತಿನ್ ಶ್ರೀಯಾನ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ವೇದಿಕೆಯಲ್ಲಿ ಪ್ರಜ್ವಲ್, ನಿಖಿಲ್, ಇಸ್ತಿಕಾರ ಹಾಗೂ ಇತರರು ಹಾಜರಿದ್ದರು.
.