ಕೊಂಕಣಿಜ್ ವೇದಿಕೆ ಆರಂಭ

0
4

ಮಂಗಳೂರು: ವಿಶ್ವಾದ್ಯಂತದ ಕೊಂಕಣಿ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ಕೊಂಕಣಿಜ್ ವೇದಿಕೆ ಆರಂಭ. ಭಾಷೆ, ಉಪಭಾಷೆ, ಲಿಪಿ, ಗಡಿ ಅಂತರ ಕಡಿಮೆ ಮಾಡಿ ಸಾಂಸ್ಕೃತಿಕ ಬಂಧ ಬಲಪಡಿಸುವುದು, ಪರಂಪರೆ ಉತ್ತೇಜಿಸುವ ಉದ್ದೇಶ. ಮೆಂಡೋನ್ಸ್ ಫೌಂಡೇಶನ್ ನ ಡಾ. ವಿವೇಕ್ ಮೆಂಡೋನ್ಸ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದರ ಭಾಗವಾಗಿ ಸೆಪ್ಟೆಂಬರ್ 18ರಂದು ಮಧ್ಯಾಹ್ನ 3:45 ಕ್ಕೆ ಸಂತ ಅಲೋಶಿಯಸ್ ಆವರಣದ ಎಲ್ ಸಿ ಆರ್ ಐ ಸಭಾಂಗಣದಲ್ಲಿ ನಾಚೋಂ ಯಾ ಕುಂಪಸಾರ ಕೊಂಕಣಿ ಚಲನ ಚಿತ್ರವನ್ನು ಪ್ರದರ್ಶಿಸಲಾಗುವುದು ಎಂದರು. ಪೌಲೋಸ್ ಎನ್ ವಿ, ರೆಕ್ಸ್ ಫೆರ್ನಾಂಡಿಸ್, ಆಂಟೋನಿಯೋ ಫೆರ್ನಾಂಡಿಸ್, ಟೈಟಸ್ ನೊರನ್ನ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್