ಕಾರ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಕಳ ಶಾಖೆ, ಕಾರ್ಕಳ ತಾಲೂಕು ವತಿಯಿಂದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 20ರಂದು ನಡೆಯಲಿದೆ.
ಕಾರ್ಯಕ್ರಮವು ಬೆಳಿಗ್ಗೆ 9:30ರಿಂದ ನೌಕರರ ಭವನ, ಕಾರ್ಕಳದಲ್ಲಿ ನಡೆಯಲಿದ್ದು, ಬಳಿಕ ಮಧ್ಯಾಹ್ನ 1:30ರಿಂದ 2:30ರವರೆಗೆ ಸರ್ಕಾರಿ ನೌಕರರು ಹಾಗೂ ನೌಕರರ ಮಕ್ಕಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.
ಮಧ್ಯಾಹ್ನ 2:30ರಿಂದ 4:30ರವರೆಗೆ ಉತ್ತರ ಕನ್ನಡದ ಯಕ್ಷ ಮಾಣಿಕ್ಯ ಕುಮಾರಿ ಚಿಂತನ ಹೆಗಡೆ ಬಳಗದವರಿಂದ ಯಕ್ಷಗಾನ ನಾಟ್ಯ ವೈಭವ ಪ್ರಸ್ತುತಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಕಳ ಶಾಖೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕೋರಿದ್ದಾರೆ.
Home Uncategorized ಸೆ.20ರಂದು ಕಾರ್ಕಳದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಾಂಸ್ಕೃತಿಕ ವೈಭವ
