ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ , ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿಯ ಹಾಜಿ ಅಬ್ದುಲ್ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸಂದೀಪ್ ಶೆಟ್ಟಿ ಸಾರಥ್ಯದ ಏಸ್ ಕ್ರೀಟ್ ಅಡೆಷನ್ಸ್ ಹಾಗೂ “ಉಸಿರು ಕೋಟ ” ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ 2026ನೇ ಸಾಲಿನ ಪ್ರತಿಷ್ಠಿತ ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರಕ್ಕೆ ಆಯ್ಕೆ ಪಟ್ಟಿ ಪ್ರಕಟಗೊಂಡಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸರ್ಕಾರಿ ಪದವಿಪೂರ್ವ ಕಾಲೇಜು ಕಬಕ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಡಾ. ಶಾಂತಾ ಪುತ್ತೂರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂವತ್ತೊಂದು ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜು ಕಬಕ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಟ್ಲ ಸ್ಥಳೀಯ ಸಂಸ್ಥೆಯ ಜೊತೆ ಕಾರ್ಯದರ್ಶಿಯಾಗಿ ಆರು ವರ್ಷ ಸೇವೆ .ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಬಂಟ್ವಾಳ ತಾಲೂಕು ಯೋಗಸಂಘಟಕಿಯಾಗಿ ಎಂಟು ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೇಂದ್ರಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಪುತ್ತೂರು ಘಟಕದ ಅಧ್ಯಕ್ಷೆ ಯಾಗಿದ್ದಾರೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷ ರು,.ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ: ಸಮಿತಿ ಕಾಸರಗೋಡು ಕರ್ನಾಟಕದ ರಾಜ್ಯ ಸಂಚಾಲಕ ರು. ಕನಸು ಕ್ಲಸ್ಟರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಎರಡು ವರ್ಷ ಕೆಲಸ ಮಾಡಿರುತ್ತಾರೆ. ಸಾಹಿತಿ ಗಣೇಶ ಪ್ರಸಾದ ಪಾಂಡೇಲು ಸಾರಥ್ಯದ ಅಕ್ಷರದೀಪ ಅಕ್ಷರ ಜ್ಯೋತಿ ಸಾಹಿತ್ಯ ಬಳಗದ ಸಂಯೋಜಕಿ ಹಾಗೂ ಅಕ್ಷರದೀಪ ಬಳಗದ ನಿರ್ವಾಹಕಿಯಾಗಿದ್ದಾರೆ.ನಲಿಕಲಿ ಯೋಗ ರಾಜ್ಯ ಸಂಪನ್ಮೂಲ ವ್ಯಕ್ತಿ ಯಾಗಿದ್ದು ರಾಜ್ಯ ಮಟ್ಟದ ಯೋಗಾಸನ ತೀರ್ಪುಗಾರರ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿದ್ದಾರೆ.ರಾಜ್ಯದ ನಾನಾ ಕಡೆ ವಿದ್ಯಾರ್ಥಿ ಗಳಿಗೆ ಮಹಿಳೆಯರಿಗೆ, ಹಿರಿಯ ರಿಗೆ ಯೋಗ ತರಬೇತಿ ನೀಡಿರುತ್ತಾರೆ.ಜೀವನ ವಿಜ್ಞಾನ, ಸಮಾಜ ವಿಜ್ಞಾನವಿಷಯ ಸಂಪದೀಕರಣ ಎಸ್.ಡಿ.ಎಂ.ಪಿ.ತರಬೇತಿ ಕಿಶೋರಿ, ಪಂಚಮುಖ ವ್ಯಕ್ತಿ ತ್ವ ವಿಕಸನ ತರಬೇತಿ ನೀಡಿರುತ್ತಾರೆ ನೇತ್ರಾವತಿ ಜ್ಞಾನ ವಿಕಾಸ ಕೇಂದ್ರದ ಹಿರಿಯ ನಾಗರಿಕರಿಗೆ ಕೊರೋನ ಸಂದರ್ಭದಲ್ಲಿ ಉಚಿತ ಮಾಸ್ಕ್ ವಿತರಿಸಿದ್ದಾರೆ. ಕಲಿಕಾ ನ್ಯೂನತೆ ಇರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ ಈ ಬಾರಿ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆ ಯಲ್ಲಿ ಕನ್ನಡ ದಲ್ಲಿ ಶೇಕಡಾ ನೂರು ಫಲಿತಾಂಶ ಬಂದಿದೆ.ಅನೇಕ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದು ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿರುತ್ತಾರೆ. ಇವರ ಸೌರಭ ಕವನ ಸಂಕಲನ ಬಿಡುಗಡೆ ಗೊಂಡಿದೆ ಇವರ ವ್ಯಕ್ತಿ ಚಿತ್ರ ಅಮೃತ ಪ್ರಕಾಶ ಪತ್ರಿಕೆ,ಪೊಸಡಿಗುಂಪೆ ಪತ್ರಿಕೆ ಯಲ್ಲಿ ಪ್ರಕಟವಾಗಿದೆ ಆಕಾಶವಾಣಿ ಮಂಗಳೂರು ರೇಡಿಯೋ ವನಿತಾವಾಣಿ ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ.ರೇಡಿಯೋ ಪಾಂಚಜನ್ಯ ದಲ್ಲಿ ಇವರ ಉಪನ್ಯಾಸ ಪ್ರಸಾರಗೊಂಡಿದೆ ಅನೇಕ ವಿಚಾರಗೋಷ್ಠಿ ಗಳಲ್ಲಿ ವಿಷಯ ಮಂಡಿಸಿರುತ್ತಾರೆ.ಅನೇಕ ಕವಿಗೋಷ್ಠಿ, ಸಾಹಿತ್ಯ ಕಮ್ಮಟ,ಯೋಗ ತರಬೇತಿ,ಸಮ್ಮೇಳನ ನಡೆಸಿರುತ್ತಾರೆ.ನಲಿ ಕಲಿ ಯೋಗ ರಾಜ್ಯ ಸಂಪನ್ಮೂಲ ವ್ಯಕ್ತಿ.ರಾಜ್ಯಮಟ್ಟದ ಯೋಗಾಸನ ತೀರ್ಪು ಗಾರರ ಪರೀಕ್ಷೆ ಯಲ್ಲಿ ಉತ್ತೀರ್ಣ.ರಾಜ್ಯ ಮಟ್ಟದ ಯೋಗಾಸನ ತೀರ್ಪು ಗಾರರು.ಶಿಕ್ಷಣ ಜ್ಞಾನ ಪತ್ರಿಕೆಯಿಂದ ಜ್ಞಾನ ಸಿಂಧು ರಾಜ್ಯ ಪ್ರಶಸ್ತಿ ಪಡೆದಿರುತ್ತಾರೆ.ಸಮಾಜವಿಜ್ಞಾನ ವಿಷಯ ಸಂಪದೀಕರಣ,ಕಿಶೋರಿ,ಎಸ್.ಡಿ.ಎಂ.ಸಿ.ತರಬೇತಿ ಜೀವನ ವಿಜ್ಞಾನ ತರಬೇತಿ ನೀಡಿರುತ್ತಾರೆ.ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಕವನ ಪ್ರಸಾರವಾಗಿದೆ.ಉತ್ತಮ ಶಿಕ್ಷಕಿ ನೆಲೆಯಲ್ಲಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ತಾಲೂಕಿನಲ್ಲಿ ಸನ್ಮಾನ ಗೈಡ್ಸ್ ಶಿಕ್ಷಕಿಯಾಗಿದ್ದು ಗೈಡ್ಸ್ ಲಾಂಗ್ ಸರ್ವಿಸ್ ಅವಾರ್ಡ್ ಪಡೆದಿರುತ್ತಾರೆ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಬಳಬೆಟ್ಟು ವಿದ್ಯಾವರ್ಧಕ ಸಮಿತಿ ಗೌರವ ಸಲಹೆಗಾರರು. ಯೋಗಭೂಷಣ ಪ್ರಭೋದ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿ ಯೋಗಭೂಷಣ ಪ್ರಶಸ್ತಿ ಚಿನ್ನದ ಪದಕ ಪಡೆದಿದ್ದಾರೆ ಮಿತ್ರ ಸಮಾಜ ಭಜನಾ ಮಂಡಳಿ ಸದಸ್ಯರು ಬೆಂಗಳೂರಿನ ಜಾಗೃತಿ ಸೇವಾ ಟ್ರಸ್ಟ್ ಸೇವಾ ಸಂಸ್ಥೆ ಆಶ್ರಯದಲ್ಲಿ ಎಡನೀರು ಮಠದಲ್ಲಿ ನಡೆದ ಗಡಿನಾಡಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ರಾಜ್ಯ ಪ್ರಶಸ್ತಿ ಪ ಡೆದಿರುತ್ತಾರೆ ಕಥಾಬಿಂದು ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಇವರಿಗೆ ಲಭಿಸಿದೆ .ಇವರಿಗೆ ಶಿಕ್ಷಣ ಸಾಹಿತ್ಯ ಸಂಘಟನೆಗೆ ಹಲವಾರು ರಾಜ್ಯ ಪ್ರಶಸ್ತಿ ಲಭಿಸಿದೆ.ಸಂಘ ಸಂಸ್ಥೆಯವರು ಗೌರವಿಸಿರುತ್ತಾರೆ.
ಶಿಕ್ಷಣ, ಸಾಹಿತ್ಯ ಸಂಘಟನೆಗೆ ಇವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.ನಾಡೋಜ ಡಾ.ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026ಗಡಿನಾಡ ಕನ್ನಡ ಸಮ್ಮೇಳನ ದಲ್ಲಿ ದೊರೆತಿದೆ.ಯುವಸಿರಿ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ಗಳಿಂದ ಪುರಸ್ಕೃತರು. ಡಾ. ಶಾಂತಾ ಪುತ್ತೂರುರವರಿಗೆ ಸೆಪ್ಟೆಂಬರ್ 26 ರಂದು ಶನಿವಾರ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಸಿ ಕುಂದರ್ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ,ಪಿ.ಡಿ.ಓ.ರವೀಂದ್ರ ರಾವ್, ಹಾಗೂ ಕಾರ್ಯದರ್ಶಿ ಸುಮತಿ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

