ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಹರೀಶ್ ಪೂಂಜರಿಗೆ ಬ್ರಾಹ್ಮಣ ಮಹಾಸಭಾ ಗೌರವಾರ್ಪಣೆ

0
6

ಬೆಳ್ತಂಗಡಿ: ಕರ್ನಾಟಕ ಟಿವಿ ಚಾನೆಲ್ ವತಿಯಿಂದ ಇತ್ತೀಚೆಗೆ ‘ಉತ್ತಮ ಶಾಸಕ’ ಪ್ರಶಸ್ತಿಗೆ ಪುರಸ್ಕೃತರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.

ಸೆ.20ರಂದು ಶಾಸಕರ ಮಿಥಿಲಾ ನಿವಾಸಕ್ಕೆ ಆಗಮಿಸಿದ ಬ್ರಾಹ್ಮಣ ಮಹಾಸಭಾ ಸಮಾಜದ ಪ್ರಮುಖರು ಹಾಗೂ ಬಂಧುಗಳು ಶಾಸಕರನ್ನು ಅಭಿನಂದಿಸಿದರು. ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಅವರ ನೇತೃತ್ವದಲ್ಲಿ ಶಾಸಕರಿಗೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಪ್ರದೀಪ್ ನಾವೂರು, ಬಿ.ಕೆ. ಧನಂಜಯ ರಾವ್, ಗಿರೀಶ್ ಡೋಂಗ್ರೆ, ಕೇಶವ ಭಟ್ ಅತ್ತಾಜೆ, ಅನಂತ್ ಭಟ್ ಮಚ್ಚಿಮಲೆ, ಯೋಗೀಶ್ ಭಿಡೆ, ಅರುಣ್ ಕುಮಾರ್ ಸೇರಿದಂತೆ ಹಲವು ಗಣ್ಯರು, ಪ್ರಮುಖರು ಹಾಗೂ ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳು ಉಪಸ್ಥಿತರಿದ್ದರು.