ಶ್ರೀ ರಾಮ ಶಿಶುಮಂದಿರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

0
6

ಮೊಗ್ರು: ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ.), ಅಲೆಕ್ಕಿ, ಮುಗೇರಡ್ಕ–ಮೊಗ್ರು ಗ್ರಾಮ ಶ್ರೀ ರಾಮ ಶಿಶುಮಂದಿರದ ನೂತನ ಕಟ್ಟಡದ ಮಹಾಪೋಷಕರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸೆ.19ರಂದು ಶಿಶುಮಂದಿರಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕರು ಶಿಶುಮಂದಿರದ ಪುಟಾಣಿಗಳ ಕುಶಲೋಪಚಾರ ವಿಚಾರಿಸಿ, ಮಕ್ಕಳೊಂದಿಗೆ ಆತ್ಮೀಯವಾಗಿ ಸಮಯ ಕಳೆದರು. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಪೂರಕವಾಗುವಂತೆ ನಿರ್ಮಿಸಲಾಗಿರುವ ನೂತನ ಕಟ್ಟಡ ಹಾಗೂ ಮಕ್ಕಳ ಅನ್ನಯಜ್ಞದ ಕೊಠಡಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಶುಮಂದಿರಕ್ಕೆ ಆಗಮಿಸಿದ ಶಾಸಕರನ್ನು ಪುಟಾಣಿಗಳು ಹೂ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಶಿಶುಮಂದಿರದ ಸಂಚಾಲಕರ ವತಿಯಿಂದ ಶಾಸಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿಶುಮಂದಿರದ ಸಂಚಾಲಕ ಪ್ರವೀಣ್ ಮತ್ತಿಲಾರು, ಮಾಜಿ ಅಧ್ಯಕ್ಷ ರಮೇಶ್ ನೆಕ್ಕರಾಜೆ, ಬಂದಾರು ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಮಾಜಿ ಸದಸ್ಯ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ, ವಿನಯ ಬರುಂಗುಡೇಲು ಹಾಗೂ ಶಿಶುಮಂದಿರದ ಮಾತಾಜಿಗಳು ಉಪಸ್ಥಿತರಿದ್ದರು.