
ದಾವಣಗೆರೆ : ಮಕ್ಕಳು ಉಚಿತ ಚಿತ್ರಕಲೆಗೆ ಭಾಗವಹಿಸಿ ಕೇವಲ ಬಹುಮಾನಗಳಿಗೆ ಸೀಮಿತವಾಗದೇ ಇಂತಹ ವಿಜೃಂಭಣೆಯ ಶ್ರೀ ಗಣಪತಿ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಚಿತ್ರ ಕಲೆಗಳು ಸಂಸ್ಕೃತಿ, ಸಂಸ್ಕಾರ ಬೆಳೆಯುತ್ತದೆ.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ನಿರಂತರವಾಗಿ ಕಠಿಣ ಪರಿಶ್ರಮದಿಂದ 36 ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಸಂಸ್ಕೃತಿಗಳನ್ನು ಬೆಳೆಯುತ್ತಾ ಹೋಗುವುದ ಶ್ಲಾಘನೀಯ ಎಂದು ದಾವಣಗೆರೆ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ (ರಾಮ ಎಂಡ್ ಕೋ ಸರ್ಕಲ್) ಶ್ರೀ ವಿನಾಯಕ ದೇವಸ್ಥಾನದ ಪುರೋಹಿತರಾ ಶಾಂತಯ್ಯ ಹಿರೇಮಠರವರು ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗೆ ಕಿರಿಯ ಹಿರಿಯ ಕಲಾವಿದರಿಗೆ ಉಚಿತ ಶ್ರೀ ಗಣಪತಿ ಚಿತ್ರ ಬರೆಯುವ ಸ್ಪರ್ಧೆಯ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಲಾಕುಂಚದ ಅಧ್ಯಕ್ಷರಾದ ವಾಸುದೇವ ಎಲ್. ರಾಯ್ಕರ್ ಮಾತನಾಡಿ, ಯಾವುದೇ ಸಂಘ ಸಂಸ್ಥೆಗಳು ಮಾಡದೇ ಇರುವಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಕರ್ನಾಟಕ ರಾಜ್ಯಾದ್ಯಂತ ನಡೆಸುತ್ತಿರುವುದು ದಾವಣಗೆರೆಯ ಕಲಾಕುಂಚ. ಎಲೆಮರೆಯ ಕಾಯಿಯಂತೆ ಅನೇಕರಿಗೆ ಅವರ ಪ್ರತಿಭೆಗಳನ್ನು ಅನಾವರಣಗೊಳಿಸುವುದು ಮುಕ್ತ ವೇದಿಕೆಗಳನ್ನು ಕಲ್ಪಿಸುವುದು ಇತರೆ ಸಂಘ ಸಂಸ್ಥೆಗಳಿಗೆ ಮಾದರಿ ಎಂದರು.
ಶ್ರೀ ವರಸಿದ್ಧಿ ವಿನಾಯಕ ಸಮಿತಿಯ ಅಧ್ಯಕ್ಷರಾದ ನಾಗೇಂದ್ರ ರೆಡ್ಡಿ, ಚಿತ್ರಕಲಾವಿದರು, ತೀರ್ಪುಗಾರರಾದ ಚಂದ್ರಶೇಖರ ಎಸ್.ಸಂಗಾ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಸಮಿತಿಯ ಸದಸ್ಯರಾದ ಅವಿನಾಶ್ ಬಸವರಜ್, ಸಿದ್ದೇಶ್ವರ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಚಿತ ಚಿತ್ರಕಲೆಯಲ್ಲಿ ಭಾಗವಹಿಸಿದ ಕಿರಿಯ, ಹಿರಿಯ ಕಲಾವಿದರಿಗೆ ಬಹುಮಾನ ವಿಜೇತರಾದವರಿಗೆ ಅಭಿನಂದನಾ ಪತ್ರ ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ನೀಡಿ ಗೌರವಿಸಿದರು.
ಕುಮಾರಿ ವರ್ಷ ಪಿ. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ಸ್ವಾಗತಿಸಿ, ಅಚ್ಚುಕಟ್ಟಾಗಿ ನಿರೂಪಿಸಿ ಕೊನೆಗೆ ವಂದಿಸಿದರು.
