ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ

0
5

ಮೂಡುಬಿದಿರೆ ತಾಲೂಕು ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ ಸೆಪ್ಟೆಂಬರ್ 20ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ಕೇಶವ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಲ್ಲಿಕಾ ವಾರ್ಷಿಕ ವರದಿ, ಲೆಕ್ಕಪತ್ರ ಗಳನ್ನು ಮಂಡಿಸಿದರು. ಲೆಕ್ಕ ಪರಿಶೋಧನಾ ವರದಿ ಮತ್ತು ಲಾಭಾಂಶದ ವಿಂಗಡಣೆಯನ್ನು ಹಿರಿಯ ಸಹಾಯಕ ಬಾಲಕೃಷ್ಣ ದೇವಾಡಿಗ ನೀಡಿದರು. ಅಂದಾಜು ಆಯವ್ಯಯವನ್ನು ಹಿರಿಯ ಸಹಾಯಕ ಉಮೇಶ್ ನಾಯ್ಕ ನೀಡಿದರು. ಕಚೇರಿ ಸಹಾಯಕಿ ರೇಣುಕಾ, ಅಟೆಂಡರ್ ಅಶ್ವಿತ್, ಸ್ವಸಹಾಯ ಸಂಘಗಳ ಸೇವಾ ನರಿತರು ಪ್ರತಿಮಾ, ಎಲಿಜ ಕೊರೆಯ, ರಾಜೇಶ್ ನಾಯ್ಕ, ಸುಲತಾ, ಅಮಿತಾ, ವಿನಯ್ ನಾಯ್ಕ ಕಾರ್ಯಕ್ರಮ ಸಂಘಟಿಸಿದ್ದರು.

ಸಂಘವು 62.86 ಲಕ್ಷ ಪಾಲು ಬಂಡವಾಳ ಹೊಂದಿದೆ. 28.35 ಲಕ್ಷ ಠೇವಣತಿ ಹೊಂದಿದೆ. ವಿವಿಧ ಬ್ಯಾಂಕುಗಳಲ್ಲಿ 22.01ಲಕ್ಷ ಠೇವಣಿಗಳನ್ನು ಇರಿಸಲಾಗಿದೆ. ಶೇಕಡ 93 ಶಾಲಾ ವಸೂಲಾತಿ ಆಗಿದೆ. 25 26 ನೇ ಸಾಲಿನಲ್ಲಿ 50.72 ಲಕ್ಷ ಇವುಗಳ ಲಾಭ ಬಂದಿರುತ್ತದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಪುರಸ್ಕರಿಸಲಾಗಿದೆ.

ವೇದಿಕೆಯಲ್ಲಿ ಉಪಾಧ್ಯಕ್ಷ ಸುಧಾಕರ ಪೂಜಾರಿ, ನಿರ್ದೇಶಕರುಗಳಾದ ನಾಗರಾಜ್ ಕಾಮತ್, ಮಾರುತಿ ಭಟ್ ಕೆ ಎಸ್, ವಸಂತ ಎಂ ಕುಮಾರ್, ವಿದ್ಯಾನಂದ, ಆಶಾಲತಾ, ವಿಶಾಲಾಕ್ಷಿ, ಸತೀಶ್ ಅಮೀನ್, ಜಾನ್ಸನ್ ಪ್ರವೀಣ್ ಡಿಸೋಜ, ರತನ್ ಕೆ, ಸುಕುಮಾರ್ ನಾಯ್ಕ, ಹಾಗೂ ಇತರರು ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್