ಗುರುಪೂಜೆ, ಕಚೇರಿ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಅಲ್ಬಾಡಿ ಇವರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಯವರ 172 ನೇ ಜನ್ಮ ದಿನಾಚರಣೆ ಅಂಗವಾಗಿ ಗುರುಪೂಜೆ, ಕಛೇರಿ ಉದ್ಘಾಟನೆ ಹಾಗೂ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವು ದಿನಾಂಕ 20/09/2026 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಆಲ್ಬಾಡಿಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರ ವಿಧಾನಸಭಾ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಹಿಂದಿನ ಕಾಲದಲ್ಲಿ ಹಿಂದುಳಿದ ವರ್ಗಕ್ಕೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಣೆ ಆದಾಗ ನಾರಾಯಣ ಗುರುಗಳು ಸಂಘರ್ಷ ಮಾಡದೆ ಮೌನ ಕ್ರಾಂತಿಯಿಂದ ಅವರೇ ದೇವಸ್ಥಾನ ಕಟ್ಟಿ ಸರ್ವರಿಗೂ ಅವಕಾಶ ಕಲ್ಪಿಸಿದರು ಅವರ ತತ್ವದಂತೆ ಎಲ್ಲರು ಜೀವಿಸಬೇಕು ಎಂದು ಹೇಳಿದರು.
ಪ್ರಕಾರ ವಾಗ್ಮಿ ಹಾಗೂ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಇದರ ಸ್ಥಾಪಕರಾದ ಸಾಕ್ಷಾತ್ ಯು.ಕೆ ಗುರುತತ್ವ ಸಂದೇಶ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಲ್ಬಾಡಿ ಇದರ ಅಧ್ಯಕ್ಷರಾದ ರಾಜೀವ ಪೂಜಾರಿ ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲಾ ಜನಾಂಗದ ಮಧ್ಯೆ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎನ್ನುವ ನಾರಾಯಣ ಗುರು ತತ್ವ ಸಂದೇಶವನ್ನು ಮೈಗೂಡಿಸಿಕೊಂಡು ಬಂದಂತ ಸಂಘಟನೆ ನಮ್ಮದು 2012 ರಲ್ಲಿ ಸಂಘಟನೆ ಪ್ರಾರಂಭವಾಗಿದ್ದು ಎಲ್ಲರ ಸಹಕಾರದಿಂದ ಸಂಘದ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಹೆಬ್ರಿ ಇದರ ಅಧ್ಯಕ್ಷರಾದ ಬೆಳಂಜೆ ಹರೀಶ್ ಪೂಜಾರಿ ಮಾತನಾಡಿ ಆಲ್ಬಾಡಿ ಬಿಲ್ಲವ ಸಂಘದ ಈ ಬೆಳವಣಿಗೆ ನೋಡಿ ತುಂಬಾ ಸಂತೋಷವಾಗುತ್ತದೆ ಈ ಬೆಳವಣಿಗೆಗೆ ಕಾರಣ ಇಲ್ಲಿನ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಅವರ ಕಮಿಟಿಯ ಶ್ರಮವೇ ಕಾರಣ, ಸಂಘದ ಕಟ್ಟಡದ ಕೆಲಸ ಆದಷ್ಟು ಬೇಗ ಪೂರ್ಣಗೊಂಡು ಉದ್ಘಾಟನೆ ಆಗುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ, ವನದುರ್ಗಾ ಟ್ರಾನ್ಸ್ ಪೋರ್ಟ್ ಮಾಲಕರಾದ ಚಂದ್ರ ಶೇಖರ ಪೂಜಾರಿ,ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಲ್ಬಾಡಿ ಇದರ ಗೌರವಾಧ್ಯಕ್ಷರಾದ ಪ್ರೇಮ್ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಪೂಜಾರಿ ಶಾಂದ್ರಬೆಟ್ಟು, ಸಂಘದ ಉಪಾಧ್ಯಕ್ಷರುಗಳಾದ ಭಾಸ್ಕರ ಪೂಜಾರಿ, ಬಾಬು ಪೂಜಾರಿ ಕೆರ್ಜಾಡಿ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಸಂಘಕ್ಕೆ ಸ್ಥಳ ನೀಡಿದ ಟಿ.ಕೆ. ಅಬ್ದುಲ್ ರೆಹಮಾನ್ ಮತ್ತು ಪ್ರಗತಿಪರ ಕೃಷಿಕರಾದ ಸೀತಾರಾಮ ಪೂಜಾರಿ ಯವರನ್ನು ಸನ್ಮಾನಿಸಲಾಯಿತು.
ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಲಾಯಿತು.
ಸಂಘದ ಕೋಶಾಧಿಕಾರಿ ಸುಧಾಕರ ಪೂಜಾರಿ ಪಾಟ್ಲಮಕ್ಕಿ ಸರ್ವರನ್ನು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸುರೇಶ್ ಪೂಜಾರಿ ಬೆಳ್ವೆ ಹಾಗೂ ಸಂತೋಷ್ ಪೂಜಾರಿ ಗುಮ್ಮೊಲ ನೆರವೇರಿಸಿದರು.

