
ಮಂಗಳೂರು : ದಿವಂಗತ ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟ್ ನ ಆಶ್ರಯದಲ್ಲಿ ಜರ್ನಿ ಥಿಯೇಟರ್ ಗ್ರೂಪ್ (ರಿ) ಮಂಗಳೂರು ಇವರ ಸಹಯೋಗದೊಂದಿಗೆ 12 ವರ್ಷಕ್ಕಿಂತ ಮೇಲಿನ ಮಕ್ಕಳಿಗೆ ಒಂದು ದಿನದ ‘ಕ್ಯಾಂಪಸ್ ಥಿಯೇಟರ್’ ಒಂದು ದಿನದ ರಂಗಭೂಮಿ ಕಾರ್ಯಾಗಾರವು ತಾ 20-09-2026 ರಂದು ಶ್ರೀ ಮಾತಾ ಕಲಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ರಂಗಕಲಾವಿದರಾದ ಸೋಮಪ್ಪ ಕುಲಾಲ್ ಕಣ್ವತೀರ್ಥ ಮಾಲಕರು ಭಾಗ್ಯಶ್ರೀ ಫಾನ್ಸಿ ಕುಂಜತ್ತೂರು ರವರು ದೀಪ ಬೆಳಗಿಸಿ ಉದ್ಘಾಟಿಸಿದರು, ಕಾರ್ಯಕ್ರಮ ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ಜಯಶೀಲಾ ಟೀಚರ್ ಕಾಸರಗೋಡು ವಹಿಸಿದ್ದರು. ಕಾರ್ಯಾಗಾರವನ್ನು ಜರ್ನಿ ಥಿಯೇಟರ್ ನ ರಾಘವ್ ಸೂರಿ,ಶ್ರೀ ಸುದೀಶ್, ಶಶಾಂಕ್, ಕಿರಣ್, ಶ್ರೀಶ, ರಾಹುಲ್, ರೋಹಿತ್, ರೋಹನ್,ಕುಮಾರಿ ಕ್ಷಿತಿ ನಡೆಸಿಕೊಟ್ಟರು,ಮಂಗಳೂರು ಒಲವಿನ ಹಳ್ಳಿಯ ಸಿಸ್ಟರ್ ಹಾಗೂ ವಿದ್ಯಾರ್ಥಿಗಳು ಮತ್ತು ಊರಿನ ಹಲವಾರು ಕಲಾಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಕಾರ್ಯಕ್ರಮವು ಮಾತಾ ಕಲಾ ಮಂದಿರದ ಸಂಗೀತ ತರಗತಿಯ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾಗಿ, ಟ್ರಸ್ಟ್ ನ ಸದಸ್ಯೆ ಚಂದ್ರಿಕಾ ಟೀಚರ್ ಸ್ವಾಗತಿಸಿ ಮಾಳವಿಕಾ ವಂದಿಸಿದರು.

ಕುಶಲಾಕ್ಷಿ ಕಣ್ವತೀರ್ಥ, ರಾಜೀವಿ,ಸ್ಮಿತ ತೂಪಿನಾಡು, ಶಾರದಾ ತೂಮಿನಾಡು, ರವಿ ಉಚ್ಚಿಲ್, ವಾಸು ಕುಂಬ್ಳೆ ಸಹಕರಿಸಿದರು.
