ಶುಭೋದಯ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ (ರಿ) ಶಿರ್ಲಾಲು ಇದರ ಮಹಾಸಭೆಯನ್ನು 21/09/2026 ಸೋಮ ವಾರದಂದು ಪಂಚಾಯಿತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ನಳಿನಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯನ್ನು ಪ್ರಾರ್ಥನೆಯೊಂದಿಗೆ ಪ್ರಾರಂಬಿಸಲಾಯಿತು. LCRP ಅಶ್ವಿನಿ ರವರು ಎಲ್ಲರನ್ನ ಸ್ವಾಗತಿಸಿದರು. ಹಿರಿಯ ನಿರೀಕ್ಷಣ ಅರೋಗ್ಯ ಅಧಿಕಾರಿಯಾದ ಗೌರೀಶ್ MK ಯವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. MBK ರೋಹಿಣಿ ರವರು 2025- 2026 ನೇ ಸಾಲಿನ ಮಹಾಸಭೆಯ ವರದಿಯನ್ನು ಮಂಡಿಸಿದರು. ಸಂಜೀವಿನಿ ಚಪ್ಪಾಳೆ ಮೂಲಕ ವರದಿಯನ್ನು ಅನುಮೋದಿಸಲಾಯಿತು.
2025-2026 ನೇ ಸಾಲಿನ ಜಮಾ ಖರ್ಚನ್ನುLCRP ಸುನೀತಾ M ಸಭೆಗೆ ಮಂಡಿಸಿದರು .ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಸರ್ ಅವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಸಂಜೀವಿನಿ ಯೋಜನೆಯ ದ್ಯೇಯೋದ್ದೇಶದ ಬಗ್ಗೆ, ಜೀವನೋಪಾಯ ಚಟುವಟಿಕೆ ಬಗ್ಗೆ ಇತರ ಹಲವಾರು ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.ಸಭೆಯಲ್ಲಿ ಸಂಜೀವಿನಿ ಗೀತೆಯನ್ನು ಹಾಡಿಸಿದರು.
ಪದಗ್ರಹಣ ನಡೆಸಿ 8 ಮಂದಿ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉದ್ಘಾಟನೆಯನ್ನು ನೇರವೇರಿಸಿ ಕೊಟ್ಟ ಹಾಗೂ ಒಕ್ಕೂಟದ ಅಧ್ಯಕ್ಷರಾದ ನಳಿನಿ ಇವರು ಪ್ರಾಸ್ತಾವಿಕ ಮಾತುಗಳ್ನಾ ಡಿದರು .ಪಶು ಸಖಿ ನಿರ್ಮಲ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಕೃಷಿ ಸಖಿ ಅಶ್ವಿನಿ ಕೆ ಇವರ ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

