
ಮಂಗಳೂರು : KMC ಆಸ್ಪತ್ರೆ ಅತ್ತಾವರ ಮತ್ತು ಆಯುಷ್ ಫೆಡರೇಷನ್ ಆಫ್ ಇಂಡಿಯಾ (ರಿ) ದ.ಕ. ಮತ್ತು ಮಂಗಳೂರು ಘಟಕದ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನದ ಪೂರ್ವಭಾವಿಯಾಗಿ CME ಕಾರ್ಯಕ್ರಮ ಮತ್ತು ಐವರು ಗಣ್ಯ ವೈದ್ಯರಿಗೆ ಸನ್ಮಾನ ಸಮಾರಂಭವು ದಿ ಓಷಿಯನ್ ಪರ್ಲ್‌ನಲ್ಲಿ ನಡೆಯಿತು.
ದೇವ ಧನ್ವಂತರಿ ಸ್ತುತಿ ಸಹಿತ ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮ ಆರಂಭಿಸಲಾಯಿತು.
ಮುಖ್ಯ ಭಾಷಣಕಾರ ಡಾ. ಭೂಷಣ್ ಶೆಟ್ಟಿ ಅವರು “ಡಯಾಬಿಟಿಕ್ ಕಿಡ್ನಿ ಡಿಸೀಸ್” ಕುರಿತು ಅತಿ ಸರಳವಾಗಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿ ಡಾ. ಚಕ್ರಪಾಣಿ ಎಂ. ಅವರು ಮಾತನಾಡುತ್ತಾ ಸನ್ಮಾನಿತರನ್ನು ಅಭಿನಂದಿಸಿದರು ಹಾಗೂ ಇಂಟಿಗ್ರೇಟೆಡ್ ಪದ್ಧತಿಯ ಮಹತ್ವ ತಿಳಿಸಿದರು. ಉಪಾಧ್ಯಕ್ಷ ಡಾ. ಸುರೇಶ್ ನೆಗಳಗುಳಿ, ಉಡುಪಿ ಘಟಕ ಅಧ್ಯಕ್ಷ ಡಾ ನಾರಾಯಣ ಟಿ ಅಂಚನ್ ಮತ್ತಿತರರು ಗಣ್ಯರೊಂದಿಗೆ ಉಪಸ್ಥಿತರಿದ್ದರು.
ಇದೇ ವೇಳೆ ಅನುಭವಿ ವೈದ್ಯರಾದಡಾ. ಶ್ರೀದೇವಿ ಆರ್. ಭಟ್. ಡಾ. ಸಂತೋಷ್ ಕುಮಾರ್ ಶಾಸ್ತ್ರಿ. ಡಾ. ಪ್ರದೀಪ್ ಎ. ಡಾ. ಪ್ರಸಾದ್ ಶೆಟ್ಟಿ ಡಾ. ವಿನಯ್ ಪ್ರಸಾದ್ ಇವರನ್ನು ಸನ್ಮಾನಿಸಲಾಯಿತು. ಕುಟುಂಬ ಸಮೇತ ಅವರು ಸನ್ಮಾನ ಸ್ವೀಕರಿಸಿದರು.
ವರದಿ : ಡಾ ಸುರೇಶ ನೆಗಳಗುಳಿ
