ಐವನ್ ಡಿ’ಸೋಜಾ ಶಿಫಾರಸ್ಸು: ಏಳು ಮಂದಿಗೆ ಚಿಕಿತ್ಸಾ ನೆರವು

0
5

ಮಂಗಳೂರು: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಏಳು ಅರ್ಜಿದಾರರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ನೆರವು ಮಂಜೂರಾಗಿದ್ದು, ಪರಿಹಾರ ಧನದ ಬಿಡುಗಡೆ ಪತ್ರಗಳನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ಶಿಫಾರಸ್ಸು ಹಾಗೂ ಮನವಿಯ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಫಲಾನುಭವಿಗಳಿಗೆ ಚಿಕಿತ್ಸಾ ವೆಚ್ಚದ ನೆರವು ಮಂಜೂರಾಗಿದೆ. ಈ ಮೂಲಕ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಕುಟುಂಬಗಳಿಗೆ ಆರ್ಥಿಕ ನೆರವು ದೊರೆತಂತಾಗಿದೆ.

ಮರಿಯ ತೆರೇಸಾ ಡಿ’ಸೋಜಾ ಹಾಗೂ ನವೀನ್ ಕೋಟ್ಯಾನ್ ಬೋಳೂರು ಅವರಿಗೆ ರೂ.2 ಲಕ್ಷ, ಸಾಜಿಯಾ ಮಮ್ತಾಜ್ ಕಣ್ಣೂರು ಅವರಿಗೆ ರೂ.1,92,770, ಉಮ್ಮರ್ ಫಾರೂಕ್ ಪುತ್ತೂರು ಅವರಿಗೆ ರೂ.1,09,700, ಹೇಮಲತಾ ಕಿನ್ನಿಗೋಳಿ ಅವರಿಗೆ ರೂ.27,741, ಜಮೀಲ ಕಣ್ಣೂರು ಅವರಿಗೆ ರೂ.19,324, ಕೃತಿನ್ ಜಿ. ಶೆಟ್ಟಿ ಅವರಿಗೆ ರೂ.8,262 ಹಾಗೂ ಶಕೀನ ಭಾನು ಕಣ್ಣೂರು ಅವರಿಗೆ ರೂ.6,897 ಪರಿಹಾರ ಧನ ಮಂಜೂರಾಗಿದೆ ಎಂದು ತಿಳಿಸಲಾಗಿದೆ.

ಪರಿಹಾರ ಧನದ ಬಿಡುಗಡೆ ಪತ್ರಗಳನ್ನು ಐವನ್ ಡಿ’ಸೋಜಾ ಅವರ ಕಚೇರಿಯಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕ ಚಿಕಿತ್ಸಾ ವೆಚ್ಚ ಭರಿಸಲು ಸಂಕಷ್ಟ ಎದುರಿಸುತ್ತಿರುವವರಿಗೆ ಆರ್ಥಿಕ ನೆರವು ಒದಗಿಸುವ ಕಾರ್ಯ ಮುಂದುವರಿದಿದೆ.

ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಕಾರ್ಪೊರೇಟರ್‌ಗಳಾದ ಜೆ. ನಾಗೇಂದ್ರ ಕುಮಾರ್, ಭಾಸ್ಕರ್ ರಾವ್ ಹಾಗೂ ಸತೀಶ್ ಪೆಂಗಲ್, ಕಾಂಗ್ರೆಸ್ ಮುಖಂಡರಾದ ಅಮೃತ್ ಕದ್ರಿ, ಮೀನಾ ಟೆಲ್ಲಿಸ್ ಮತ್ತು ಇಮ್ರಾನ್ ಎ.ಆರ್. ಉಪಸ್ಥಿತರಿದ್ದರು.