
ಪುತ್ತೂರು : ಅಕ್ಷಯ ಕಾಲೇಜಿನಲ್ಲಿ ಒಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ರವರು ಕರ‍್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಒಣಂ ಕೇರಳದ ರಾಜ್ಯ ಹಬ್ಬವಾದರು, ಗಡಿನಾಡಿನ ನಾವೆಲ್ಲರೂ ಸೌಹರ‍್ದದಿಂದ ಆಚರಿಸುತ್ತೇವೆ. ದೇಶದ ಐಕ್ಯತೆಯನ್ನು ಬಲ ಪಡಿಸಲು ಗಡಿನಾಡಿನ ಜನರು ರಾಜ್ಯಗಳ ಹಬ್ಬ ಹರಿದಿನಗಳನ್ನು ಆಚರಣೆ ಮಾಡುವುದು ಸೂಕ್ತ. ಸೌಹರ‍್ದ ಜೀವನ ಶೈಲಿ ನಮ್ಮ ಜೀವನಕ್ಕೆ ಮೆರುಗು ನೀಡುವುದು. ಅಖಂಡ ಭಾರತ ಸಂಕಲ್ಪ ವನ್ನು ನಾವು ಯಥಾವತ್ತಾಗಿ ಕಾಪಾಡಿಕೊಂಡು ಬರಬೇಕು ಎನ್ನುತ್ತಾ ಕರ‍್ಯಕ್ರಮಕ್ಕೆ ಶುಭಹಾರೈಸಿದರು .

ವೇದಿಕೆಯಲ್ಲಿ ಕಾಲೇಜಿನ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನರ‍್ದೇಶಕಿ ಕಲಾವತಿ ಜಯಂತ್, ಕರ‍್ಯದರ‍್ಶಿ ಡಾ ಅಕ್ಷಯ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಡಾ ರ‍್ಪಿತ್ . ಟಿ. ಎ, ಪದವಿ ಪರ‍್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅಭಿಲಾಷ್ ಕ್ಷತ್ರಿಯ, ಸಂಯೋಜಕಿ ರಶ್ಮಿ ಕೆ, ವಿದ್ಯರ‍್ಥಿ ಕ್ಷೇಮಪಾಲನಾಧಿಕಾರಿ ಶ್ರೀ ಅಶೋಕ ರೈ , ಒಣo ಕರ‍್ಯಕ್ರಮದ ಸಂಯೋಜಕಿ ಅನನ್ಯ ಭಟ್, ಲಲಿತ ಕಲಾ ಸಂಘದ ಸಂಯೋಜಕಿ ರಶ್ಮಿತಾ ಎಸ್, ವಿದ್ಯರ‍್ಥಿ ಒಕ್ಕೂಟದ ಅಧ್ಯಕ್ಷ ಸರ‍್ಯ, ಉಪಾಧ್ಯಕ್ಷೆ ರಕ್ಷಾ ಭಾಗವಹಿಸಿದರು. ಹಬ್ಬದ ಆಚರಣೆ ಅಂಗವಾಗಿ , ಚೆಂಡೆ ಮೇಳಂ’ ವಿಶೇಷ ಆರ‍್ಷಣೆಯೊಂದಿಗೆ ವಿವಿಧ ಸ್ರ‍್ಧೆಗಳನ್ನು ರ‍್ಪಡಿಸಲಾಗಿತ್ತು .
