ಅ.11ರಿಂದ 20ರವರೆಗೆ ನೆಲ್ಲಿ ನಿಟ್ಟೆಯಲ್ಲಿ ನವರಾತ್ರಿ ಮಹೋತ್ಸವ

0
36

ಕಾರ್ಕಳ : ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ, ಶ್ರೀ ಕ್ಷೇತ್ರ ನೆಲ್ಲಿ ನಿಟ್ಟೆ ಇಲ್ಲಿ ನವರಾತ್ರಿ ಮಹೋತ್ಸವವು ಅ.11ರಿಂದ 20ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿದಿನ ಸಂಜೆ 6.30ರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಶ್ರೀ ದೇವಿಗೆ ಸೇವಾರ್ಥಿಗಳ ಪೂಜೆ ನೆರವೇರಲಿದೆ. ರಾತ್ರಿ 8 ಗಂಟೆಗೆ ಮಹಾಪೂಜೆ ಹಾಗೂ ನಂತರ ಅನ್ನಪ್ರಸಾದ ವಿತರಣೆ ನಡೆಯಲಿದೆ.

ಅ.20ರಂದು ಬೆಳಿಗ್ಗೆ 9 ಗಂಟೆಯಿಂದ ಮಹಾಚಂಡಿಕಾಯಾಗ ವಿಶೇಷವಾಗಿ ನಡೆಯಲಿದೆ. ನವರಾತ್ರಿ ಮಹೋತ್ಸವದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಆಡಳಿತ ಮೊಕ್ತೇಸರರು ಮನವಿ ಮಾಡಿದ್ದಾರೆ.