ಇರುವೈಲು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಬಟಾರ ಆಯ್ಕೆ

0
35

ಮೂಡುಬಿದಿರೆ : ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 16ನೇ ವರ್ಷದ (2026-27) ಗಣೇಶೋತ್ಸವ ಆಚರಣೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಬಟಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ನಾಯ್ಕ ಕುತ್ಯಾಡಿ ಆಯ್ಕೆಯಾಗಿದ್ದಾರೆ.

ಸಭೆಯ ಆರಂಭದಲ್ಲಿ 15ನೇ ವರ್ಷದ ಗಣೇಶೋತ್ಸವದ ಲೆಕ್ಕಪತ್ರವನ್ನು ನಿರ್ಗಮಿತ ಕಾರ್ಯದರ್ಶಿ ಯತೀಶ್ ಕರ್ಕೇರ ಅವರು ಸಾರ್ವಜನಿಕರ ಸಮ್ಮುಖದಲ್ಲಿ ಮಂಡಿಸಿದರು.

ನೂತನ ಪದಾಧಿಕಾರಿಗಳು : ಗೌರವ ಅಧ್ಯಕ್ಷರಾಗಿ ಸೋಮಶೇಖರ್ ಕೋಟ್ಯಾನ್, ಉಪಾಧ್ಯಕ್ಷರಾಗಿ ಕಿಶೋರ್ ಗಾಣಿಗ ಕೊಪ್ಪಳ, ಜತೆ ಕಾರ್ಯದರ್ಶಿಯಾಗಿ ರವಿರಾಜ್ ಕೊಪ್ಪಳ, ಕೋಶಾಧಿಕಾರಿಯಾಗಿ ಜನಾರ್ಧನ ಪೂಜಾರಿ ದೇವರಗುಡ್ಡೆ, ಜತೆ ಕೋಶಾಧಿಕಾರಿಯಾಗಿ ಸಚಿನ್ ಪೂಜಾರಿ ಗಾಂಧೋಟ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬಾಲಚಂದ್ರ ಶೆಟ್ಟಿ ಕುತ್ಯಾಡಿ, ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂಪತ್ ಕುಮಾರ್ ಪುಚ್ಚೆರ್, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ದೇವರಗುಡ್ಡೆ, ಶುಭಕರ ಸಾಲ್ಯಾನ್ ನೀರಲ್ಕೆ ಹಾಗೂ ವಸಂತ ದೇವರಗುಡ್ಡೆ ಮತ್ತು ಲೆಕ್ಕಪರಿಶೋಧಕರಾಗಿ ಚಿರಾಗ್ ಬಿಯಂದಕೋಡಿ ಆಯ್ಕೆಯಾಗಿದ್ದಾರೆ.

ಈ ಕುರಿತು ಸಮಿತಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.