ಇಂದು (ಸೆ.24) ಪುತ್ತಿಗೆ ಶ್ರೀಗಳ ಚಾತುರ್ಮಾಸ ವೃತ ಸಮಾಪ್ತಿ , ಶ್ರೀಗಳಿಗೆ ಗುರುವಂದನೆ

0
15

ನವಿಮುಂಬಯಿ : ಪುತ್ತಿಗೆ ಮಠದ ನವಿಮುಂಬೈಯ ವಾಸಿಯ ಸೆಕ್ಟರ್12 ರಲ್ಲಿರುವ ಪುತ್ತಿಗೆ ಮಠದ ಶಾಖೆಯಲ್ಲಿ ಚಾತುರ್ಮಾಸ ವೃತ ಆಚರಣೆಯಲ್ಲಿರುವ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಚಾತುರ್ಮಾಸ ವೃತಾಚರಣೆಯು (ಸೆ.24) ಇಂದು ಸಮಾಪ್ತಿಗೊಳ್ಳಲಿದೆ.

ಆ ಪ್ರಯುಕ್ತ ಸಂಸ್ಥಾನ ಪೂಜೆ ಬೆಳಿಗ್ಗೆ 7.00 ಗಂಟೆಗೆ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ಬೆಳಿಗ್ಗೆ 8.00 ಗಂಟೆಗೆ ಸಮಾಪ್ತಿಗೊಂಡಿತು. ಮಧ್ಯಾಹ್ನ 11 ಗಂಟೆಗೆ ಮಹಾಪೂಜೆ, 12 ಗಂಟೆಗೆ ಗುರುಗಳಿಗೆ ಗುರುವಂದನೆ ನಡೆಯಲಿದ್ದು, ಬಳಿಕ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ. ಆನಂತರ ಅನ್ನಪ್ರಸಾದ ನೇರವೇರಲಿದೆ.

ಮಧ್ಯಾಹ್ನ 2 ಗಂಟೆಗೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ . ಪ್ರಸಂಗ ‘ಹರಿ ಭಕ್ತ ಸುಧಾನ್ವ’, ಭಾಗವತರಾಗಿ ಮೋಹನದಾಸ ರೈ, ಚೆಂಡೆ ಮದ್ದಲೆಯಲ್ಲಿ ಹರೀಶ ನಾರಾಯಣ ಸಾಲ್ಯಾನ್, ಅರ್ಥವಾದಿಗಳಾಗಿ ವಾಸುದೇವ ಮಾರ್ನಾಡ್, ಸುರೇಶ ನಂದೊಳ್ಳಿ, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಸಂಜೆ 4.00 ರಿಂದ 6.00 ವರೆಗೆ ಭಜನೆ ಜರುಗಲಿದೆ.

ಮಠದ ಪ್ರಧಾನರಾದ ರತೀಶ್ ತಂತ್ರಿ ಮತ್ತು ಚಾತುರ್ಮಾಸ ವೃತ ಸಮಾಪ್ತಿ ಅಧ್ಯಕ್ಷರಾದ ಶಿವರಾಮ್ ಜಿ ಶೆಟ್ಟಿ ಅಜೆಕಾರ್, ಗೌರವ ಅಧ್ಯಕ್ಷರಾದ ಪ್ರಹ್ಲಾದ್ ಆಚಾರ್ಯ ನಾಗರಹಳ್ಳಿ, ಡಾ.ಸುರೇಶ ರಾವ್, ಸಿಎ ಎನ್ ಆರ್ ರಾವ್, ಸಂಚಾಲಕರು ಸುಧೀರ್ ಆರ್‌ಎಲ್ ಶೆಟ್ಟಿ, ಉಪಾಧ್ಯಕ್ಷರಾದ ವಾಮನ ಹೊಳ್ಳ ಚೆಂಬೂರು,

ಅಣ್ಣಿ ಶೆಟ್ಟಿ ( ಘನ್ನೋಲಿ ಮುಕಾಂಬಿಕಾ ದೇವಸ್ಥಾನ ), ಬಿ ಆರ್‌ಶೆಟ್ಟಿ, ಕಾರ್ಯಾಧ್ಯಕ್ಷರು ಗೋಪಾಲ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿ ರಾಘವೇಂದ್ರ ಜಮದಗ್ನಿ, ಡೊಂಬಿವಲಿ ನಾಗೇಂದ್ರ ಆಚಾರ್ಯ, ಗುರುಪ್ರಸಾದ್ ಭಟ್ ಘನ್ನೋಲಿ, ಕೋಶಾಧಿಕಾರಿ ಸಂತೋಷ್ ಸಿ ಶೆಟ್ಟಿ, ಜೊತೆ ಕೋಶಾಧಿಕಾರಿ ಗುರುಪ್ರಸಾದ್ ಚೆಂಬೂರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.