ಸೆ. 26 ರಿಂದ ಓಂ ಚಂಡಿಕಾ ಸೇವಾ ಟ್ರಸ್ಟ್ನಿಂದ ವಿವಿಧ ಅಧ್ಯಾತ್ಮಿಕ ಪರಂಪರೆಯ ಉಚಿತ ಸಮಾರಂಭ

0
12

ದಾವಣಗೆರೆ : ಓಂ ಚಂಡಿಕಾ ಸೇವಾ ಟ್ರಸ್ಟ್ವತಿಯಿಂದ ಸೆಪ್ಟೆಂಬರ್ 26 ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶ್ರೀ ದುರ್ಗಾ ಸಪ್ತಶತೀ ಬೀಜಮಂತ್ರ ದೀಕ್ಷಾ ಸಾಧನೆ, ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 9 ರವರೆಗೆ ಪಿತೃ ಪಕ್ಷ ಪೂಜೆ, ಸೆಪ್ಟೆಂಬರ್ 29 ರಂದು ಮಂಗಳವಾರ ಸಂಜೆ 7 ರಿಂದ ರಾತ್ರಿ 9 ರವರೆಗೆ ಅಂಗಾರಕ ಚತುರ್ಥಿಯ ಪ್ರಯುಕ್ತ ಮಹಾಗಣಪತಿ ಹೋಮ, ಅಕ್ಟೋಬರ್ 5 ರಿಂದ 7 ರವರೆಗೆ 3 ದಿನಗಳ ಕಾಲ ಉಚಿತ ಧ್ಯಾನ ಶಿಬಿರ, ಅಕ್ಟೋಬರ್ 11 ಮತ್ತು 25 ರಂದು ಪ್ರತೀ 2ನೇ ಮತ್ತು 4ನೇ ಭಾನುವಾರ “ಮಧುಮೇಹ ನಿರ್ಮೂಲನೆ ಅಂದೋಲನ’ ಉಚಿತ ಕಾಸ್ಮಿಕ್ ಹೀಲಿಂಗ್ ತೆರೆಪಿ ದಾವಣಗೆರೆಯ ಎಂ.ಸಿ.ಸಿ. `ಬಿ’ ಬ್ಲಾಕ್, 7ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಓಂ ಚಂಡಿಕಾ ಸೇವಾ ಟ್ರಸ್ಟ್ನ ಸಂಸ್ಥಾಪಕರಾದ ಡಾ. ಅಘೋರಿ ಚಿದಂಬರ ಯೋಗಿಯವರು ತಿಳಿಸಿದ್ದಾರೆ.

ಆಧ್ಯಾತ್ಮಿಕ ಪರಂಪರೆಯ ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ 9380389236 ಈ ಸನೀಹವಾಣಿಗೆ ಸಂಪರ್ಕಿಸಬೇಕಾಗಿ ಓಂ ಚಂಡಿಕಾ ಸೇವಾ ಟ್ರಸ್ಟ್ನ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.