ನಡೂರು : ಶ್ರೀ ಗೋಪಾಲಕೃಷ್ಣ ಆಂಜನೇಯ ಮಹಿಳಾ ಭಜನಾ ಮಂಡಳಿ (ರಿ.) ಅಲೆಯ ಮೇಲ್ಮಠ , ರಜತಾದ್ರಿ ಫ್ರೆಂಡ್ಸ್ ನಡೂರು ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಶಾರದೋತ್ಸವವು ಅ.18ರಂದು ಶ್ರೀ ಗೋಪಾಲಕೃಷ್ಣ ಆಂಜನೇಯ ದೇವಸ್ಥಾನ, ಅಲೆಯ ಮೇಲ್ಮಠ , ನಡೂರು ಇದರ ವಠಾರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಗೋಪಾಲಕೃಷ್ಣ ಆಂಜನೇಯ ಮೂರ್ತಿಗೆ ಚಂದನ ಅಲಂಕಾರ, 9 ಗಂಟೆಗೆ ಬಿಂಬ ಶುದ್ದಿ , ಪೂರ್ವಕ ಪ್ರಾಣಪ್ರತಿಷ್ಠೆ ಪೂಜೆ, 9.30ಕ್ಕೆ ಸಾರ್ವಜನಿಕ ಗಣಹೋಮ ಹಾಗೂ 10 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ, 3.30ಕ್ಕೆ ರಂಗಪೂಜೆ ಹಾಗೂ ಸಂಜೆ 4.40ಕ್ಕೆ ವಿಸರ್ಜನಾಂಗ ಪ್ರಸನ್ನ ಪೂಜೆ ನಡೆಯಲಿದೆ.
ಬಳಿಕ ವೈಭವದ ಪುರಮೆರವಣಿಗೆಯೊಂದಿಗೆ ಜಲಸ್ತಂಭನ ಕಾರ್ಯಕ್ರಮ ನಡೆಯಲಿದೆ. ದೇವತಾ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು, ಮನ, ಧನದ ಸಹಕಾರದೊಂದಿಗೆ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.

