ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ 21 ನೇ ವಾರ್ಷಿಕ ಮಹಾಸಭೆ : 65 %ಬೋನಸ್ ! 15 % ಡಿವಿಡೆಂಟ್ ವಿತರಣೆ

0
14

ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘದ 2025 _ 26 ನೇ ಸಾಲಿನ 21ನೇ ವಾರ್ಷಿಕ ಮಹಾಸಭೆಯು ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಸೆಪ್ಟೆಂಬರ್ 24 ಗುರುವಾರದಂದು ಸಂಘದ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘವು ಕಳೆದ ಹಲವಾರು ವರ್ಷಗಳಂತೆ ಈ ವರ್ಷವೂ ಲೆಕ್ಕ ಪರಿಶೋಧನೆಯಲ್ಲಿ “ಎ” ಗ್ರೇಡ್ ಸಾಧನೆಯನ್ನು ಕಾಯ್ದುಕೊಂಡಿದ್ದು, ₹3,02,518.51/- ಲಾಭ ಗಳಿಕೆಯ ಜೊತೆಗೆ ಪ್ರಸಕ್ತ ವರ್ಷದಲ್ಲಿ ಹೈನುಗಾರ ಸದಸ್ಯರಿಗೆ 65 % ಬೋನಸ್ ಮತ್ತು 15 % ಡಿವಿಡೆಂಟ್ ವಿತರಿಸಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಎಲ್ಲಾ ಕಡೆ ಹಿರಿಯರೇ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಯುವ ಜನತೆ ಆಸಕ್ತಿ ವಹಿಸಿ ಜವಾಬ್ದಾರಿ ತೆಗೆದುಕೊಂಡಾಗ ಮಾತ್ರ ಹೈನುಗಾರಿಕೆಯಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ನಿರಂತರ ಏರುತ್ತಿರುವ ಹೈನುಗಾರಿಕೆಯ ಖರ್ಚು ವೆಚ್ಚಗಳ ಮಧ್ಯೆಯೂ, ಗುಣಮಟ್ಟದ ಹಾಲಿನ ಉತ್ಪಾದನೆಯ ಸಾಧನೆ ತೋರಿಸುತ್ತಿರುವ ಹೈನುಗಾರರಿಗೆ ಸರಕಾರದ ಸಹಾಯಧನ ಪ್ರತಿ ಲೀಟರ್ಗೆ ₹5/- ಹೆಚ್ಚಿಸಬೇಕು ಮತ್ತು ದುಬಾರಿ ಆಗಿರುವ ನಂದಿನಿ ಪಶುಆಹಾರದ ದರದಲ್ಲಿ ಕೇಜಿಗೆ ಕನಿಷ್ಠ ₹5/-ದರದಲ್ಲಿ ಸಬ್ಸಿಡಿಯನ್ನು ಒದಗಿಸುವಂತೆ ರಾಜ್ಯ ಸರಕಾರ ಮತ್ತು ಒಕ್ಕೂಟ ಹಾಗೂ ಹಾಲು ಮಹಾಮಂಡಳಿಗೆ ಒತ್ತಾಯಿಸಿ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿಯಿತು.

ಸಂಘದ ಉಪಾಧ್ಯಕ್ಷರಾದ ಶ್ರೀ ರಾಯಲ್ ನೊರೋನ್ನಾರವರು ಸ್ವಾಗತಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಶೆಟ್ಟಿ ಯವರು 2024 – 25 ನೇ ಸಾಲಿನ ಮಹಾಸಭೆಯ ನಡಾವಳಿಯನ್ನು ಓದಿ ಸ್ತಿರೀಕರಿಸಿದರು. ನಿರ್ದೇಶಕರಾದ ಜಯಶೆಟ್ಟಿಗಾರ್ ರವರು ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿದರು.

2026_ 27ನೇ ಸಾಲಿನ ಅಂದಾಜು ಆಯವ್ಯಯವನ್ನು ಸಂಘದ ನಿರ್ದೇಶಕರಾದ ಯಶೋಧ ಸುವರ್ಣ ಮತ್ತು ಸಂಘದ ಕಾರ್ಯ ಚಟುವಟಿಕೆಗಳು ಮತ್ತು ಯೋಜನೆಗಳ ವಿವರಗಳನ್ನು ನಿರ್ದೇಶಕರಾದ ಸೋಮಶೇಖರ್ ರಾವ್ ರವರು ನೀಡಿದರು.

ಸಂಘದ ನಿರ್ದೇಶಕರಾದ ದಿಲೀಪ್ ಶೆಟ್ಟಿಯವರು ಸಂಘದ ನೀತಿ ಸಂಹಿತೆ ಯನ್ನು ಮಂಡಿಸಿದರು.

ಸಂಘದ ಲೆಕ್ಕಪರಿಶೋಧನಾ ವರದಿಯ ಪರಿಶೀಲನೆಯ ಜೊತೆಗೆ ಹೈನುಗಾರ ಸದಸ್ಯರಿಗೆ ಹಾಲು ಒಕ್ಕೂಟ, ಹಾಲು ಮಹಾ ಮಂಡಳಿ, ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಸಿಗುವ ಹಲವಾರು ಯೋಜನೆಗಳು ಮತ್ತು ಸಾಲ ಸೌಲಭ್ಯಗಳ ಮಾಹಿತಿಯನ್ನು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಯಶವಂತ್ ರವರು ಸಂವಾದ ರೂಪದಲ್ಲಿ ನಡೆಸಿಕೊಟ್ಟರು.

ಸಾಧಕ ಹೈನುಗಾರರಿಗೆ ಸನ್ಮಾನ

ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ಸದಸ್ಯರಾದ ಮಾಲತಿ ಮೂಲ್ಯ, ರಾಯಲ್ ನೋರೋನ್ನಾ, ಜೆರೂಮ್. ವಿ. ಡಿ’ಸಿಲ್ವ, ಲಿಯೋನಿಲಾ ಡಿಸೋಜ,ಶ್ಯಾಮಲಾ ಶೆಟ್ಟಿ, ಸೋಮಶೇಖರ್ ರಾವ್ , ಉಮೇಶ್ ಸುವರ್ಣ , ಕರುಣಾಕರ ದೇವಾಡಿಗ , ಸುಂದರ ಶೆಟ್ಟಿ ಮತ್ತು ಪ್ರೇಮ ಶೆಟ್ಟಿ ಜೊತೆಗೆ ಸಂಘಕ್ಕೆಗುಣಮಟ್ಟದ ಹಾಲು ಪೂರೈಸಿದ ಸದಸ್ಯರಾದ ದಾದು ಪೂಜಾರಿ, ಶ್ರೀಧರ ಸಮಗಾರ ಮತ್ತು ಸುಂದರಶೆಟ್ಟಿ ಯವರನ್ನು ನಗದು ಪುರಸ್ಕಾರದ ಜೊತೆಗೆ ಗೌರವಿಸಲಾಯಿತು.

ಶೈಕ್ಷಣಿಕ ಸಾಧಕರಿಗೆ ಅಭಿನಂದನೆ

ಕಳೆದ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳ ಸಾಧನೆ ಮಾಡಿದ ಪದವಿ ಪೂರ್ವ ವಿಭಾಗದ ಕು. ಲಕ್ಷ್ಮಿತಾ.ಡಿ. ಕುಲಾಲ್, ಕು. ಪ್ರಜ್ಞಾ ಮೂಲ್ಯ ಮತ್ತು
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳ ಸಾಧನೆಗೈದ ಕು. ಲಹರಿ. ಜೆ. ಶೆಟ್ಟಿಗಾರ್, ಕು. ಅವ್ನಿ .ಪಿ.ಶೆಟ್ಟಿ ಮತ್ತು ಕು.ಕೌಶಿಕ ದೇವಾಡಿಗರವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಅದೃಷ್ಟಶಾಲಿ ಹೈನುಗಾರ ಪುರಸ್ಕಾರವನ್ನು ವಿನಿತಾ ರವರಿಗೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಶ್ರೀ ಕೊರಗ ಶೆಟ್ಟಿ, ಜಯಾನಂದ ಮೂಲ್ಯ , ಶ್ರೀಧರ ಸಮಗಾರ ಮತ್ತು ಶ್ರೀಮತಿ ಸಂಜೀವಿ ಉಪಸ್ಥಿತರಿದ್ದರು . .

ಸಂಘದ ನಿರ್ದೇಶಕರಾದ ಪೂರ್ಣಿಮಾ ಕಿಣಿಯವರು ಪ್ರಾರ್ಥನೆಗೈದರು. ಸಂಘದ ನಿರ್ದೇಶಕರಾದ ಪ್ರವೀಣ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ಹಾಲು ಪರೀಕ್ಷಕಿ ಶ್ರೀಮತಿ ಪ್ರಮೀಳಾ ರವರು ವಂದನಾರ್ಪಣೆಗೈದರು.