ರಮ್ಯಾಳ ಬೆನ್ನೆಲುಬಿನ ಶಸ್ತ್ರಚಿಕಿತ್ಸೆಗೆ ನೆರವು ಬೇಕಿದೆ

0
17

ಮೂಡುಬಿದಿರೆ : ಬೆದ್ರದ ಪುರಾತನ ಮಾರಿಗುಡಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದವರ ಪುತ್ರಿ ರಮ್ಯಾ ಅವರು Thoracolumbar Kyphoscoliosis ಎಂಬ ಗಂಭೀರ ಬೆನ್ನೆಲುಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ವೈದ್ಯರ ಸಲಹೆಯಂತೆ ರಮ್ಯಾ ಅವರಿಗೆ ತುರ್ತಾಗಿ ಮೇಜರ್ ಸ್ಪೈನಲ್ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದು, ಚಿಕಿತ್ಸೆಗೆ ಸುಮಾರು ರೂ.25 ಲಕ್ಷಕ್ಕೂ ಅಧಿಕ ವೆಚ್ಚ ತಗಲುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬವು ಚಿಕಿತ್ಸಾ ವೆಚ್ಚ ಭರಿಸಲು ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ. ಮಾನವೀಯ ಮನಸ್ಸಿನ ದಾನಿಗಳು ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.

ಚಿಕಿತ್ಸೆಗೆ ನೆರವು ನೀಡಲು ಬಯಸುವವರು ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಹಣಕಾಸಿನ ಸಹಾಯ ಮಾಡಬಹುದಾಗಿದೆ. ಸಾರ್ವಜನಿಕರು ನೀಡುವ ಸಣ್ಣ ನೆರವೂ ರಮ್ಯಾ ಅವರ ಚಿಕಿತ್ಸೆಗೆ ಮಹತ್ವದ ಸಹಕಾರವಾಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.