ಕುಂಜೂರು : ಪಣಿಯೂರು ಅಂಚೆ ವ್ಯಾಪ್ತಿಯ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಅ.11ರಿಂದ 20ರವರೆಗೆ ಶರನ್ನವರಾತ್ರಿ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆಯೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿದಿನ ಗಣಹೋಮ, ಚಂಡಿಕಾಹೋಮ, ದುರ್ಗಾಹೋಮ, ಚಂಡಿಕಾಯಾಗ, ಶ್ರೀಸೂಕ್ತ ಹೋಮ, ಲಕ್ಷ್ಮೀಹೃದಯ ಹೋಮ, ನವರಾತ್ರಿ ಪೂಜೆ, ಹೂವಿನ ಪೂಜೆ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.
ಅ.11ರಂದು ಗಣಹೋಮ, ಚಂಡಿಕಾಹೋಮ, ಅನ್ನಸಂತರ್ಪಣೆ, ಹೂವಿನ ಪೂಜೆ ಹಾಗೂ ನವರಾತ್ರಿ ಪೂಜೆ ನಡೆಯಲಿದೆ. ಅ.12ರಂದು ದುರ್ಗಾಹೋಮ, ಚಂಡಿಕಾಯಾಗ, ಅನ್ನಸಂತರ್ಪಣೆ, ಹೂವಿನ ಪೂಜೆ ಹಾಗೂ ನವರಾತ್ರಿ ಪೂಜೆ ನೆರವೇರಲಿದೆ. ಅ.13ರಂದು ಲಕ್ಷ್ಮೀಹೃದಯ ಹೋಮ, ಗಣಹೋಮ, ಚಂಡಿಕಾ ಹೋಮ, ಅನ್ನಸಂತರ್ಪಣೆ, ಹೂವಿನ ಪೂಜೆ ಮತ್ತು ನವರಾತ್ರಿ ಪೂಜೆ ನಡೆಯಲಿದೆ.
ಅ.14ರಂದು ಚಂಡಿಕಾ ಹೋಮ, ಅನ್ನಸಂತರ್ಪಣೆ, ಹೂವಿನ ಪೂಜೆ ಹಾಗೂ ನವರಾತ್ರಿ ಪೂಜೆ ನಡೆಯಲಿದೆ. ಅ.15ರಂದು ಲಲಿತಾ ಪಂಚಮಿ ಅಂಗವಾಗಿ ಚಂಡಿಕಾಹೋಮ, ಅನ್ನಸಂತರ್ಪಣೆ, ಹೂವಿನ ಪೂಜೆ, ನವರಾತ್ರಿ ಪೂಜೆ, ಗಣಹೋಮ, ದುರ್ಗಾ ನಮಸ್ಕಾರ, ವಾಯನ ದಾನ ಹಾಗೂ ಕನ್ಯಿಕಾ ಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಅ.16ರಂದು ಶ್ರೀಸೂಕ್ತ ಹೋಮ, ಚಂಡಿಕಾಯಾಗ, ಅನ್ನಸಂತರ್ಪಣೆ, ಹೂವಿನ ಪೂಜೆ, ನವರಾತ್ರಿ ಪೂಜೆ ಹಾಗೂ ಸಣ್ಣ ರಂಗಪೂಜೆ ಜರಗಲಿದೆ. ಅ.17ರಂದು ದುರ್ಗಾಹೋಮ, ಚಂಡಿಕಾಯಾಗ, ಅನ್ನಸಂತರ್ಪಣೆ, ಹೂವಿನ ಪೂಜೆ ಹಾಗೂ ನವರಾತ್ರಿ ಪೂಜೆ ನಡೆಯಲಿದೆ.
ಅ.18ರಂದು ಶ್ರೀಸೂಕ್ತ ಹೋಮ, ಚಂಡಿಕಾಯಾಗ, ಅನ್ನಸಂತರ್ಪಣೆ, ನವರಾತ್ರಿ ಪೂಜೆ ಮತ್ತು ಹೂವಿನ ಪೂಜೆ ನೆರವೇರಲಿದೆ. ಅ.19ರಂದು ದುರ್ಗಾಷ್ಟಮಿ ಅಂಗವಾಗಿ ಗಣಹೋಮ, ಚಂಡಿಕಾ ಹೋಮ, ಅನ್ನಸಂತರ್ಪಣೆ, ನವರಾತ್ರಿ ಪೂಜೆ ಹಾಗೂ ಹೂವಿನ ಪೂಜೆ ನಡೆಯಲಿದೆ.
ಅ.20ರಂದು ಮಹಾನವಮಿ ಪ್ರಯುಕ್ತ ಚಂಡಿಕಾಹೋಮ, ಪುಸ್ತಕ ಪೂಜೆ, ಸಾಮೂಹಿಕ ಹೂವಿನ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಇದೇ ದಿನ ಮಧ್ಯಾಹ್ನ 12 ಗಂಟೆಗೆ ಬಯಲು ಫ್ರೆಂಡ್ಸ್ ಕುಂಜೂರು ಇವರ ಪ್ರಾಯೋಜಕತ್ವದಲ್ಲಿ ದಿನೇಶ್ ಪಡುಬಿದ್ರಿ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ ನವರಾತ್ರಿ ಪೂಜೆ ಹಾಗೂ ಹೂವಿನ ಪೂಜೆ ನಡೆಯಲಿದೆ.
ಅ.21ರಂದು ವಿಜಯದಶಮಿ ಅಂಗವಾಗಿ ಗಣಹೋಮ, ಚಂಡಿಕಾಯಾಗ, ಲಕ್ಷ್ಮೀಹೃದಯ ಹೋಮ ಹಾಗೂ ಸಮಾರಾಧನೆ ನಡೆಯಲಿದೆ. ರಾತ್ರಿ 7 ಗಂಟೆಗೆ ಸಾಮೂಹಿಕ ದುರ್ಗಾ ನಮಸ್ಕಾರ, ಪ್ರಸಾದ ವಿತರಣೆ ನಡೆಯಲಿದ್ದು, ಬಳಿಕ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
ಮಹಾನವಮಿ ದಿನ ಅ.20ರಂದು ಬೆಳಿಗ್ಗೆ 11 ಗಂಟೆಗೆ ಭಕ್ತರ ಶ್ರೇಯೋಭಿವೃದ್ಧಿಗಾಗಿ ಸಾಮೂಹಿಕ ಹೂವಿನ ಪೂಜೆ ನಡೆಯಲಿದೆ. ಒಂದು ಪೂಜೆಗೆ ರೂ.125 ನಿಗದಿಪಡಿಸಲಾಗಿದೆ. ವಿಜಯದಶಮಿ ದಿನ ಅ.21ರಂದು ರಾತ್ರಿ 7 ಗಂಟೆಗೆ ಸಾಮೂಹಿಕ ದುರ್ಗಾ ನಮಸ್ಕಾರ ನಡೆಯಲಿದ್ದು, ಇದಕ್ಕೂ ಪೂಜೆಯೊಂದಕ್ಕೆ ರೂ.125 ನಿಗದಿಪಡಿಸಲಾಗಿದೆ.
ನವರಾತ್ರಿ ಪರ್ವಕಾಲದಲ್ಲಿ ಊರ-ಪರಊರಿನಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ. ಮಹೋತ್ಸವದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಹಾಗೂ ಭಗವದ್ಭಕ್ತರು ಸಹಕಾರ ನೀಡುವಂತೆ ದೇವಸ್ಥಾನದ ವತಿಯಿಂದ ಮನವಿ ಮಾಡಲಾಗಿದೆ.

