ಸುರತ್ಕಲ್ ವಲಯದ ಬ್ರಾಹ್ಮಣ ಸಮಾಜದ ಸಮಗ್ರ ಮಾಹಿತಿಯುಳ್ಳ ಕೈಪಿಡಿ ಯ ಅವಶ್ಯಕತೆ ಇದೆ ಪಿ ಪಿ ರಾವ್

0
12

ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯ ಇದರ 29ನೇ ವಾರ್ಷಿಕ ಮಹಾಸಭೆ ಮತ್ತು 27 ನೇ ಸಾಮೂಹಿಕ ಶ್ರೀ ಶನೈಶ್ಚರ ಪೂಜೆಯು ಶ್ರೀ ಪುತ್ತಿಗೆ ಶಾಖೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಹೊಸಬೆಟ್ಟು ಕುಳಾಯಿ ಇಲ್ಲಿ ಜರಗಿದ್ದ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರು ಪುರುಷೋತ್ತಮ ರಾವ್ ರವರು ಬ್ರಾಹ್ಮಣ ಸಮಾಜದ ಎಲ್ಲಾ ಉಪ ಪಂಗಡದವರನ್ನೆಲ್ಲ ಸೇರಿಸಿ ಬಲಿಷ್ಠ ಬ್ರಾಹ್ಮಣ ಸಂಘಟನೆಯನ್ನು ಬೆಳೆಸುವ ಪ್ರಯತ್ನ ಮುಂದುವರಿಯಲಿ, ಸುರತ್ಕಲ್ ವಲಯದ ಬ್ರಾಹ್ಮಣ ಸಮಾಜದ ಸಮಗ್ರ ಕೈಪಿಡಿಯನ್ನು ಪುನಃರಚನೆಯ ಅವಶ್ಯಕತೆ ಇದೆ ಎಂದು ತಿಳಿಸಿದ್ದು, ಗಾಯತ್ರಿ ಮಾತೆಯ ಅನುಗ್ರಹ ನಮಗಿರಲಿ ಎಂದು ಹೇಳಿದ್ದರು.

ಶ್ರೀ ಶನೈಶ್ಚರ ಪೂಜೆಯು ಮಠದ ಮ್ಯಾನೇಜರ್ ಶ್ರೀನಿಧಿ ಭಟ್ ರವರ ಪೌರೋಹಿತ್ಯದಲ್ಲಿ ನೆರವೇರಿದ್ದು ಮಹಾಪೂಜೆ ಮತ್ತು ಪ್ರಾರ್ಥನೆ ಬಳಿಕ ಪ್ರಸಾದ ವಿತರಣೆ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆಲ್ಲರಿಗೂ ಸಂಘದ ಅಧ್ಯಕ್ಷರು ಶ್ರೀ ವಿಶ್ವೇಶ್ವರ ಬದವಿದೆ ಕೃತಜ್ಞತೆಗಳನ್ನು ಸಲ್ಲಿಸಿದ್ದರು.