
ಬಂಟ್ವಾಳ: ಸಜೀಪಮೂಡ ಗ್ರಾಮದ ವಾಸುಕಿ ನಾಗರಾಜ, ಶ್ರೀ ರಕ್ತೇಶ್ವರಿ ಹಾಗೂ ಶ್ರೀ ಗುಳಿಗ ಕ್ಷೇತ್ರದ ಮೀಸೆ ನಾಗಬನದಲ್ಲಿ ವರ್ಷಾವಧಿ ಪ್ರತಿಷ್ಠಾ ದಿನಾಚರಣೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಈ ಪ್ರಯುಕ್ತ ಕಲ್ಪೋಕ್ತ ಪೂಜೆ, ಫಲ ಪಂಚಾಮೃತ ಅಭಿಷೇಕ ಹಾಗೂ ಪ್ರಸನ್ನ ಪೂಜೆಗಳು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ವಿಧಿವಿಧಾನಗಳೊಂದಿಗೆ ಜರುಗಿದವು.
ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕ್ಷೇತ್ರದಲ್ಲಿ ಭಕ್ತಿಪೂರ್ಣ ವಾತಾವರಣ ನಿರ್ಮಾಣವಾಗಿತ್ತು.
