ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಹಾಯಧನ; ಡಿಡಿ ಹಸ್ತಾಂತರ
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮಂಗಳೂರು ಯೋಜನಾ ಕಚೇರಿ ವ್ಯಾಪ್ತಿಯ ಕೋಣಾಜೆ ವಲಯದ ಬೋಳಿಯಾರ್ ಕಾರ್ಯಕ್ಷೇತ್ರದ ತಪಸ್ಯಾ ಫೌಂಡೇಶನ್, ಮುಡಿಪು ಸಂಸ್ಥೆಗೆ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ₹3.50 ಲಕ್ಷ ಸಹಾಯಧನ ನೀಡಲಾಗಿದೆ.
ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ₹3,50,000 ಮೊತ್ತದ ಡಿಡಿಯನ್ನು ಕೋಣಾಜೆ ವಲಯದ ವಲಯಾಧ್ಯಕ್ಷೆ ರವೀಣಾ ಅವರು ತಪಸ್ಯಾ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಯೂರ್ ಭಂಡಾರಿ ಅವರಿಗೆ ಹಸ್ತಾಂತರಿಸಿದರು.
ತಪಸ್ಯಾ ಫೌಂಡೇಶನ್‌ನಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಈ ನೆರವು ಬಳಕೆಯಾಗಲಿದ್ದು, ಸಂಸ್ಥೆಯ ನೀರಿನ ಅಗತ್ಯವನ್ನು ಪೂರೈಸಲು ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಉಮೇಶ್ ಗಟ್ಟಿ, ವಲಯದ ಮೇಲ್ವಿಚಾರಕ ಗಿರೀಶ್, ಸೇವಾಪ್ರತಿನಿಧಿ ಲೀಲಾ ಹಾಗೂ ತಪಸ್ಯಾ ಫೌಂಡೇಶನ್‌ನ ಸಿಬ್ಬಂದಿ ಉಪಸ್ಥಿತರಿದ್ದರು.
