ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ದಿನಾಂಕ ಘೋಷಣೆ

0
7

ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಿಲಾಮಯ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನಾಂಕವನ್ನು ಕ್ಷೇತ್ರದ ಪ್ರಮುಖರಾದ ಅಡ್ವ. ಮಹಾಬಲ ಶೆಟ್ಟಿ ಘೋಷಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಅನಂತ ಕಾಮತ್ ವಹಿಸಿದರು. ವೇದಿಕೆಯಲ್ಲಿ ಸುಧಾಕರ ಕೋಟೆಕುಂಜತ್ತಾಯ, ಕ್ಷೇತ್ರದ ಪೂರ್ವ ಅರ್ಚಕರಾದ ಹರೀಶ ಪುಣಿಚಿತ್ತಾಯ ಭಾಗಮಂಡಲ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸ್ಥಳೀಯ ಮಕ್ಕಳಿಂದ ಪ್ರಾರ್ಥನೆ, ಪ್ರಾಸ್ತಾವಿಕ ನುಡಿ ಹಾಗೂ ನಿರೂಪಣೆ ಸಮಿತಿಯ ಜತೆ ಕಾರ್ಯದರ್ಶಿಯವರಾದ ಮನೋಹರ ಮಾಸ್ಟರ್ ಗೈದರು, ಕಾಮಗಾರಿಯ ಇದುವರೆಗಿನ ಲೆಕ್ಕಚಾರವನ್ನು ಸಮಿತಿ ಕೋಶಾಧಿಕಾರಿ ಜಗಧೀಶ್ ಪ್ರಸಾದ್ ಮಂಡಿಸಿದರು. ನವೀಕರಣ ಜತೆ ಕಾರ್ಯದರ್ಶ ರೇವತಿ ಟೀಚರ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಕಾಮತ್ ಧನ್ಯವಾದವಿತ್ತರು.

ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು 2027 ಮೇ ತಿಂಗಳ 4 ರಿಂದ 12 ರ ತನಕ ಜರಗಲಿದೆ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಮಹಿಳಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.