ಅಪರೂಪದ ‘ಆಲಿವ್ ಕೀಲ್‌ಬ್ಯಾಕ್’ ಹಾವು ಪತ್ತೆ

0
71

ಮನೆಯ ಆವರಣದಲ್ಲಿ ಅಪರೂಪವಾಗಿ ಕಂಡುಬರುವ ‘ಆಲಿವ್ ಕೀಲ್‌ಬ್ಯಾಕ್’ (Olive Keelback) ಹಾವು ಪತ್ತೆಯಾದ ಘಟನೆ  ಕೋಲಾರದ ಮಾಸ್ತಿ ಬಡಾವಣೆಯಲ್ಲಿರುವ ಪಶುವೈದ್ಯ ಡಾ. ರಾಹುಲ್ ಅವರ ಮನೆಯ ಆವರಣದಲ್ಲಿ ಕಂಡುಬಂದಿದೆ.

ವಿಷರಹಿತವಾದ ಈ ನೀರಾವು ಮನೆಯ ಅಂಗಳದಲ್ಲಿ ಕಾಣಿಸಿಕೊಂಡಿದ್ದು, ಮನೆಯವರು ತಕ್ಷಣವೇ ಉರಗ ರಕ್ಷಕ ನಾಗರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅವರು ಸ್ಥಳಕ್ಕೆ ಧಾವಿಸಿ, ಜಾಗರೂಕತೆಯಿಂದ ಹಾವನ್ನು ಯಾವುದೇ ಅಪಾಯವಾಗದಂತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಹಾವನ್ನು ಸುರಕ್ಷಿತವಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಅದರ ನೈಸರ್ಗಿಕ ವಾಸಸ್ಥಳಕ್ಕೆ ಬಿಡಲಾಯಿತು. ಅಪರೂಪದ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಮರಳಿಸಿದ ಉರಗ ರಕ್ಷಕ ನಾಗರಾಜ್ ಅವರ ಕಾರ್ಯಕ್ಕೆ ಸ್ಥಳೀಯರು ಹಾಗೂ ಅರಣ್ಯಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಷರಹಿತ ಹಾವುಗಳು ಕಂಡುಬಂದಾಗ ಅವುಗಳನ್ನು ಕೊಲ್ಲದೆ, ತಜ್ಞರು ಅಥವಾ ಉರಗ ರಕ್ಷಕರಿಗೆ ಮಾಹಿತಿ ನೀಡಿ ಸುರಕ್ಷಿತವಾಗಿ ರಕ್ಷಿಸುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.