ಆತ್ಮಶುದ್ಧಿ ಮತ್ತು ಲೋಕಕಲ್ಯಾಣಕ್ಕೆ ಭಜನೆ ಸಾಧನ: ಡಾ. ಹೇಮಾವತಿ ವೀ. ಹೆಗ್ಗಡೆ

0
7

ಧರ್ಮಸ್ಥಳ: ಭಜನೆ ಕೇವಲ ಹಾಡು, ರಾಗ ಮತ್ತು ತಾಳದ ಅಭ್ಯಾಸವಲ್ಲ. ಅದು ಮನಸ್ಸನ್ನು ಶುದ್ಧಗೊಳಿಸಿ ಆತ್ಮಕಲ್ಯಾಣದೊಂದಿಗೆ ಕುಟುಂಬ, ಸಮಾಜ ಹಾಗೂ ಲೋಕಕಲ್ಯಾಣಕ್ಕೆ ದಾರಿತೋರುವ ಆಧ್ಯಾತ್ಮಿಕ ಸಾಧನೆಯಾಗಿದೆ ಎಂದು ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು.

ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಮ್ಮಟಕ್ಕೆ ಆಗಮಿಸಿರುವ ಪ್ರತಿಯೊಬ್ಬರೂ ತಾವು ಯಾವ ಉದ್ದೇಶಕ್ಕಾಗಿ ಬಂದಿದ್ದೇವೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಂಡು, ಆಲಸ್ಯಕ್ಕೆ ಅವಕಾಶ ನೀಡದೆ ಶ್ರದ್ಧೆ ಮತ್ತು ಭಕ್ತಿಯಿಂದ ಭಜನೆ ಕಲಿಯಬೇಕು. ಪರಿಣತ ಗುರುಗಳಿಂದ ಭಜನೆ ಕಲಿಯುವ ಅವಕಾಶ ದೊರೆತಿರುವುದು ಭಾಗ್ಯ ಎಂದರು.

ಜೀವನವನ್ನು ನೀರಿನಲ್ಲಿ ಸಾಗುವ ದೋಣಿಗೆ ಹೋಲಿಸಿದ ಅವರು, ದೋಣಿಯಲ್ಲಿ ಸಣ್ಣ ರಂಧ್ರ ಉಂಟಾದರೂ ಅದನ್ನು ತಕ್ಷಣ ಮುಚ್ಚದಿದ್ದರೆ ನೀರು ಒಳನುಗ್ಗಿ ದೋಣಿ ಮುಳುಗುವ ಅಪಾಯವಿರುತ್ತದೆ. ಅದೇ ರೀತಿ ಕಾಮ, ಕ್ರೋಧ, ಲೋಭ, ಮೋಹ ಮೊದಲಾದ ದುರ್ಗುಣಗಳು ಜೀವನವನ್ನು ಹಾಳುಮಾಡುತ್ತವೆ. ನಿತ್ಯ ಭಜನೆ ಮತ್ತು ಭಗವಂತನ ಸ್ಮರಣೆಯ ಮೂಲಕ ಕೆಟ್ಟ ಆಲೋಚನೆಗಳಿಗೆ ಅವಕಾಶ ನೀಡದೆ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಅನ್ನದಾನ, ಆರೋಗ್ಯ, ಶಿಕ್ಷಣ ಹಾಗೂ ದುಶ್ಚಟಗಳ ವಿರುದ್ಧ ಜನಜಾಗೃತಿ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳು ನಡೆಯುತ್ತಿವೆ. ಇವುಗಳೊಂದಿಗೆ ಭಜನಾ ಕಮ್ಮಟಕ್ಕೂ ವಿಶೇಷ ಮಹತ್ವವಿದೆ. ಭಜನಾ ಕಮ್ಮಟವು ಸಮಾಜದ ಬೇರಿಗೆ ನೀರೆರೆದಂತೆ. ಧರ್ಮ ಜೀವನದ ಬೇರು. ಬೇರು ಗಟ್ಟಿಯಾಗಿದ್ದರೆ ಮರ ಸದೃಢವಾಗಿ ಬೆಳೆಯುವಂತೆ, ಧರ್ಮದ ಆಧಾರ ಗಟ್ಟಿಯಾಗಿದ್ದರೆ ಜೀವನವೂ ಸಾರ್ಥಕವಾಗುತ್ತದೆ ಎಂದು ಹೇಳಿದರು.

ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಒಳಿತು ಮಾಡಿದರೆ ಒಳಿತಿನ ಫಲ ಹಾಗೂ ಕೆಡುಕು ಮಾಡಿದರೆ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಕರ್ಮದ ಫಲದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಭಜನೆ ನಿರಂತರವಾಗಿ ನೆನಪಿಸುತ್ತದೆ ಎಂದರು.

ಬುದ್ಧರ ಜೀವನ ಪ್ರಸಂಗವನ್ನು ಉಲ್ಲೇಖಿಸಿದ ಅವರು, ವೃದ್ಧಾಪ್ಯ, ಕಾಯಿಲೆ ಮತ್ತು ಮರಣದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದ ಅನಿತ್ಯತೆಯನ್ನು ಅರಿತು ಆಧ್ಯಾತ್ಮಿಕ ಸಾಧನೆಯತ್ತ ಮುಖಮಾಡಬೇಕು. ಶಾರೀರಿಕ ಕಷ್ಟಗಳು ಎದುರಾದಾಗ ದೇವರನ್ನು ಪ್ರಾರ್ಥಿಸುವ ನಾವು, ದೇವರಿಗಾಗಿ ನಮ್ಮ ಶರೀರ ಮತ್ತು ಸಮಯವನ್ನು ಎಷ್ಟು ಬಳಸುತ್ತಿದ್ದೇವೆ ಎಂಬುದನ್ನೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

“ವಯಸ್ಸಾದ ಮೇಲೆ ಭಜನೆ, ಧ್ಯಾನ ಮಾಡೋಣ ಎಂದು ಆಧ್ಯಾತ್ಮಿಕ ಸಾಧನೆಯನ್ನು ಮುಂದೂಡುವುದು ಸರಿಯಲ್ಲ. ನಮ್ಮ ಜೀವನದ ಗಡಿಯಾರ ಯಾವಾಗ ನಿಲ್ಲುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಬಸ್ ಅಥವಾ ರೈಲಿನ ಪ್ರಯಾಣಕ್ಕೆ ಮುಂಚಿತವಾಗಿ ಟಿಕೆಟ್ ಪಡೆದು ಸಿದ್ಧತೆ ಮಾಡಿಕೊಳ್ಳುವಂತೆ, ಜೀವನದ ಪ್ರಯಾಣಕ್ಕೂ ಸತ್ಕಾರ್ಯ ಮತ್ತು ಪುಣ್ಯಕಾರ್ಯಗಳ ಮೂಲಕ ಸಿದ್ಧತೆ ಮಾಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಕನಕದಾಸರು ಮತ್ತು ಪುರಂದರದಾಸರು ಭಕ್ತಿಯನ್ನು ವ್ಯಕ್ತಪಡಿಸಲು ಸಂಕೋಚಪಡದೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದು ಭಜನೆ ಮಾಡಿದರು. ಅವರ ಭಕ್ತಿ ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣಕ್ಕೂ ಕಾರಣವಾಯಿತು. ಇಂದಿಗೂ ಭಜನೆ, ಕುಣಿತ ಭಜನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಭಕ್ತಿ ಮತ್ತು ಜಾಗೃತಿಯನ್ನು ಮೂಡಿಸುತ್ತಿವೆ ಎಂದರು.

ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಒರಳಿನಲ್ಲಿ ಭತ್ತ ಕುಟ್ಟುವಾಗ ಮಾತುಕತೆಯ ನಡುವೆಯೂ ಒನಕೆಯ ಚಲನೆಯ ಲಯ ತಪ್ಪುತ್ತಿರಲಿಲ್ಲ. ಅದೇ ರೀತಿ ಸಂಸಾರದ ನೂರಾರು ಕೆಲಸಗಳ ನಡುವೆಯೂ ಭಗವಂತನ ಸ್ಮರಣೆಯನ್ನು ನಿರಂತರವಾಗಿ ಮಾಡಬಹುದು. ಭತ್ತದಿಂದ ಹೊಟ್ಟು ಕಳಚಿ ಅಕ್ಕಿ ದೊರೆಯುವಂತೆ, ನಿರಂತರ ಭಜನೆಯಿಂದ ಮನಸ್ಸಿನ ಅಜ್ಞಾನ ಮತ್ತು ಮಲಿನತೆ ದೂರವಾಗುತ್ತದೆ ಎಂದು ವಿವರಿಸಿದರು.

ದೇಹಕ್ಕೆ ಸೇವಿಸುವ ಅನ್ನ ಮಾತ್ರ ಆಹಾರವಲ್ಲ; ಮನಸ್ಸು ಮತ್ತು ಬುದ್ಧಿಯ ಮೂಲಕ ಒಳಗೆ ಪ್ರವೇಶಿಸುವ ಒಳ್ಳೆಯ ಮತ್ತು ಕೆಟ್ಟ ವಿಚಾರಗಳೂ ಆಹಾರವೇ ಎಂಬ ಶಂಕರಾಚಾರ್ಯರ ತತ್ತ್ವವನ್ನು ಉಲ್ಲೇಖಿಸಿದ ಅವರು, ದೂರದರ್ಶನ ಮತ್ತು ಇತರ ಮಾಧ್ಯಮಗಳ ಮೂಲಕ ನಮ್ಮ ಮನಸ್ಸು ಹಾಗೂ ಬುದ್ಧಿಗೆ ಯಾವ ರೀತಿಯ ವಿಚಾರಗಳು ಪ್ರವೇಶಿಸುತ್ತಿವೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸೂರ್ಯನ ಪ್ರತಿಬಿಂಬ ಶುದ್ಧ ನೀರಿನಲ್ಲಷ್ಟೇ ಅಲ್ಲದೆ ಕೊಳಕು ನೀರಿನಲ್ಲೂ ಕಾಣುತ್ತದೆ. ನೀರು ಕೊಳಕಾಗಿದ್ದರೂ ಸೂರ್ಯನ ಬೆಳಕಿಗೆ ಕೊರತೆಯಾಗುವುದಿಲ್ಲ; ಕೊರತೆ ಇರುವುದು ನೀರಿನ ಶುದ್ಧತೆಯಲ್ಲಿ. ಅದೇ ರೀತಿ ದೇವರು ಎಲ್ಲರೊಳಗೂ ಇದ್ದಾನೆ. ಮನಸ್ಸು ಶುದ್ಧವಾಗಿದ್ದಾಗ ದೇವರ ಸಾನ್ನಿಧ್ಯವನ್ನು ಸ್ಪಷ್ಟವಾಗಿ ಅನುಭವಿಸಲು ಸಾಧ್ಯ ಎಂದು ಹೇಳಿದರು.

ಭಜನಾ ಕಮ್ಮಟದಲ್ಲಿ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಂಡು ಭಗವಂತನ ಸ್ಮರಣೆಯನ್ನು ನಿರಂತರವಾಗಿ ಮುಂದುವರಿಸಬೇಕು. ಭಜನೆಯ ಮೂಲಕ ಮನಸ್ಸಿನ ಶುದ್ಧೀಕರಣ, ಜೀವನದ ಸಾರ್ಥಕತೆ ಹಾಗೂ ಸಮಾಜದ ಒಳಿತಿನತ್ತ ಹೆಜ್ಜೆ ಇಡಬೇಕು ಎಂದು ಡಾ. ಹೇಮಾವತಿ ವೀ. ಹೆಗ್ಗಡೆ ಕರೆ ನೀಡಿದರು.

ಭಜನಾ ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ವಿಕಾಸ್ ಆರಿಗ ಧನ್ಯವಾದ ಸಲ್ಲಿಸಿದರು.

ಆತ್ಮಶುದ್ಧಿ ಮತ್ತು ಲೋಕಕಲ್ಯಾಣಕ್ಕೆ ಭಜನೆ ಸಾಧನ: ಡಾ. ಹೇಮಾವತಿ ವೀ. ಹೆಗ್ಗಡೆ

**ಧರ್ಮಸ್ಥಳ:** ಭಜನೆ ಕೇವಲ ಹಾಡು, ರಾಗ ಮತ್ತು ತಾಳದ ಅಭ್ಯಾಸವಲ್ಲ. ಅದು ಮನಸ್ಸನ್ನು ಶುದ್ಧಗೊಳಿಸಿ ಆತ್ಮಕಲ್ಯಾಣದೊಂದಿಗೆ ಕುಟುಂಬ, ಸಮಾಜ ಹಾಗೂ ಲೋಕಕಲ್ಯಾಣಕ್ಕೆ ದಾರಿತೋರುವ ಆಧ್ಯಾತ್ಮಿಕ ಸಾಧನೆಯಾಗಿದೆ ಎಂದು ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು.