ಮೋದಿ ಜನ್ಮದಿನದ ಅಂಗವಾಗಿ ವರಂಗದಲ್ಲಿ ಸೇವಾ ಸಂಕಲ್ಪ ಅಭಿಯಾನ

0
10

ವರಂಗ ಬಿಜೆಪಿ ಗ್ರಾಮ ಸಮಿತಿ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ ಜನ್ಮದಿನದ ಸಲುವಾಗಿ ಹಾಗೂ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಸ್ಮರಿಸಿ “ಸೇವಾ ಸಂಕಲ್ಪ ಅಭಿಯಾನ”ವನ್ನು ಇಂದು ಹಮ್ಮಿಕೊಂಡಿದ್ದು ಅದರ ಅಂಗವಾಗಿ ವರಂಗ ಗ್ರಾಮದ 8 ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ. ಹೆಬ್ರಿ ಮಹಾ ಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ಸಮೃದ್ಧಿ ಪ್ರಕಾಶ್ ಶೆಟ್ಟಿ ಪಕ್ಷದ ಪ್ರಮುಖರಾದ ಹರೀಶ್ ಪೂಜಾರಿ. ಜನಾರ್ದನ ಆಚಾರ್ಯ, ರತ್ನಾಕರ ಪೂಜಾರಿ , ದಿನೇಶ್, ಪ್ರಮೀಳಾ ನಾಯ್ಕ ಸಂಗೀತ ಕಾಮತ್ ಲಕ್ಷ್ಮೀ ಕಿಣಿ, ಬೇಬಿ ರತ್ನ ಇನ್ನಿತರ ಮುಖಂಡರು ಕಾರ್ಯಕರ್ತರು ಹಾಜರಿದ್ದರು.