ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ 71ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ “ಕರುನಾಡ ಕನ್ನಡ ಕಣ್ಮಣಿ” ರಾಜ್ಯ ಪ್ರಶಸ್ತಿಯನ್ನು ಅದ್ದೂರಿಯಾಗಿ ವಿಜೃಂಭಣೆಯಿAದ ಗೌರವಿಸಿ ಸನ್ಮಾನಿಸಲಾಗುವುದು ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಎಲ್. ರಾಯ್ಕರ್ ತಿಳಿಸಿದ್ದಾರೆ.
ಕಲೆ, ಜನಪದ, ಸಾಹಿತ್ಯ, ಸಂಗೀತ, ರಂಗಭೂಮಿ, ಜಾನಪದಕಲೆ, ಸಮಾಜಸೇವೆ, ಶಿಕ್ಷಣ ಸೇರಿದಂತೆ ಈ ವರ್ಷ ಪಿಯುಸಿ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನವಂಬರ್ 15 ರಂದು ಭಾನುವಾರ ನಡೆಯಲಿರುವ ಈ ಅತ್ಯದ್ಭುತ ಸಮಾರಂಭದಲ್ಲಿ ಆಯ್ಕೆಯಾದ ಸಾಧಕರಿಗೆ ಕಲಾಕುಂಚ ಮುತ್ತೆöÊದೆಯರು ಕನ್ನಡ ತಿಲಕವಿಟ್ಟು, ಕನ್ನಡ ಕಂಕಣ ಕಟ್ಟಿ, ಕನ್ನಡಾರತಿ ಬೆಳಗಿ, ಪುಷ್ಪ ವೃಷ್ಟಿಯೊಂದಿಗೆ ಗೌರವಿಸುತ್ತಾರೆ.
ನಂತರ ಅವರದೇ ಭಾವಚಿತ್ರವಿರುವ ಸನ್ಮಾನ ಪತ್ರ ಮುದ್ರಿಸಿ, ಪ್ರೇಂ ಮಾಡಿ, ವೇದಿಕೆಯ ಪ್ರತ್ಯೇಕ ಸಿಂಹಾಸನದ ಮೇಲೆ ಕೂರಿಸಿ, ಕನ್ನಡ ಪೇಟಾದೊಂದಿಗೆ ಹಾರ, ಶಾಲು ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ ಚಿನ್ನದ ಲೇಪನದ ಪದಕ ಕೊರಳಿಗೆ ಹಾಕಿ ಗೌರವಿಸುತ್ತಾರೆ ಹೆಚ್ಚಿನ ಮಾಹಿತಿಗೆ 9538732777. ಈ ಸನೀಹವಾಣಿಗೆ ಸಂಪರ್ಕಿಸಬಹುದು. ಹೆಸರು ನೊಂದಾಯಿಸುವ ಕೊನೆಯ ದಿನಾಂಕ 31-10-2026 ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ವಿನಂತಿಸಿದ್ದಾರೆ.

