ಅ. 11 ರಂದು ಬೆದ್ರದಲ್ಲಿ ‘ತುಳು ಮಾನಾದಿಗೆದ ಮಿನದನ’ ಕಾರ್ಯಕ್ರಮ

0
7

-ಮಂದಾರ ರಾಜೇಶ್

​ತುಳುಕೂಟ (ರಿ.) ಬೆದ್ರ ಹಾಗೂ ಮೂಡುಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನ ಸಹಯೋಗದಲ್ಲಿ “ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ಸಂಭ್ರಮ ಹಾಗೂ ತುಳು ಮಾನಾದಿಗೆದ ಮಿನದನ” ಕಾರ್ಯಕ್ರಮವು 11:10:2026 ರಂದು ಬೆಳಿಗ್ಗೆ 10:10 ಗಂಟೆಗೆ ಮೂಡುಬಿದಿರೆಯ ಎಂ.ಸಿ.ಎಸ್. ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಜರುಗಲಿದೆ.

​ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟ (ರಿ.) ಅಧ್ಯಕ್ಷರಾದ ಶ್ರೀಮತಿ ಜಯಂತಿ ಎಸ್. ಬಂಗೇರ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ (ರಿ.) ಇದರ ಮುಖ್ಯಸ್ಥರಾದ ಎ.ಸಿ. ಭಂಡಾರಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ (ರಿ.) ಅಧ್ಯಕ್ಷರಾದ ಡಾ.ಎಂ. ಮೋಹನ ಆಳ್ವ ಅವರು ಭಾಗವಹಿಸಲಿದ್ದಾರೆ.

ಇದರೊಂದಿಗೆ ಕೆ. ಅಭಯಚಂದ್ರ ಜೈನ್, ಕೆ. ಶ್ರೀಪತಿ ಭಟ್, ಎಂ. ಬಾಹುಬಲಿ ಪ್ರಸಾದ್ ಹಾಗೂ ಸಂಪತ್ ಸಾಮ್ರಾಜ್ಯ ಅವರು ಗೌರವ ಉಪಸ್ಥಿತರಾಗಿರಲಿದ್ದಾರೆ.

​ಕಾರ್ಯಕ್ರಮದ ನೇತೃತ್ವವನ್ನು ತುಳುಕೂಟದ ಚಂದ್ರಹಾಸ ದೇವಾಡಿಗ, ಜಯಂತಿ ಎಸ್. ಬಂಗೇರ, ಚೇತನಾ ರಾಜೇಂದ್ರ ಹೆಗ್ಡೆ, ಶ್ರೀಮತಿ ಶ್ವೇತಾ ಕೆ. ಜೈನ್, ಶಿವರಾಮ ಜಿ. ಶೆಟ್ಟಿ, ಪ್ರಸಾದ್ ಭಂಡಾರಿ, ಸದಾನಂದ ನಾರಾವಿ, ಜಿನೇಂದ್ರ ಹೆಗ್ಡೆ ಪದ್ಮಶ್ರೀ ಭಟ್ ಹಾಗೂ ತುಳುಕೂಟ (ರಿ.) ಬೆದ್ರ ಸರ್ವ ಸದಸ್ಯರು ವಹಿಸಿದ್ದಾರೆ.

ತುಳು ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಐತಿಹಾಸಿಕ ಯಶಸ್ಸಿನ ಸಂಭ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಲಾಗಿದೆ.