ಕವಿತ್ತ ಕರ್ಮಮಣಿ ಫೌಂಡೇಷನ್‌ವತಿಯಿಂದ ಪ್ರತಿಭಾವಂತ ಶಿಕ್ಷಕ-ಶಿಕ್ಷಕಿಯರಿಗೆ ಪ್ರಶಸ್ತಿ ಪ್ರಧಾನಕ್ಕೆ ಆಹ್ವಾನ

0
25

ದಾವಣಗೆರೆ : ಬೆಳಗಾವಿಯ ಕವಿತ್ತ ಕರ್ಮಮಣಿ ಫೌಂಡೇಷನ್ ಆಶ್ರಯದಲ್ಲಿ ವಿಶ್ವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸರ್ಕಾಇರ, ಅನುದಾನಿತ, ಖಾಸಗಿ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಹಾಗೂ ಶಿಕ್ಷಕ-ಶಿಕ್ಷಕಿಯರು ವೃತ್ತಿಯಿಂದ ನಿವೃತ್ತಿ ಹೊಂದಿರುವ ಪ್ರತಿಭಾವಂತ ಶಿಕ್ಷಕ-ಶಿಕ್ಷಕಿಯರಿಗೆ ಅಂತರಾಷ್ಟಿçÃಯ ಮಟ್ಟದ `ವಿದ್ಯಾಚೇತನ ಪ್ರಶಸ್ತಿ’’, “ಜ್ಞಾನ ಜ್ಯೋತಿ ಪ್ರಶಸ್ತಿ”, “ಗುರುಕುಲ ತಿಲಕ ಪುರಸ್ಕಾರ”, “ಜ್ಞಾನ ಸಾಧಕ ಪುರಸ್ಕಾರ” ಗಳನ್ನು 2026ನೇ ಅಕ್ಟೋಬರ್ 25 ರಂದು ವರ್ಚುವಲ್ ಸಮಾರಂಭವನ್ನು ಆಯೋಜಿಸಿ ಗೌರವ ಪೂರ್ವಕವಾಗಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕವಿತ್ತ ಕರ್ಮಮಣಿ ಫೌಂಡೇಷನ್‌ನ ಅಧ್ಯಕ್ಷರಾದ ಎಲ್.ಹೆಚ್.ಪೆಂಡಾರಿ ತಿಳಿಸಿದ್ದಾರೆ.

ಪ್ರತಿಭಾವಂತ ಶಿಕ್ಷಕ-ಶಿಕ್ಷಕಿಯರು ಅಕ್ಟೋಬರ್ 20ನೇ ದಿನಾಂಕದೊಳಗೆ ಸಂಸ್ಥೆಯ ಅಧ್ಯಕ್ಷರ ಈ ಸನೀಹವಾಣಿಗೆ 9743867298 ಸಂಪರ್ಕಿಸಿ ಸಂಕ್ಷಿಪ್ತ ಪರಿಚಯವನ್ನು ಕಳಹಿಸುವ ಮೂಲಕ ಸಮಾರಂಭದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ವೇದಿಕೆಯ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.