ಲಯನ್ಸ್‌ ನಿಂದ ಶಿಕ್ಷಕರ ತರಬೇತಿ ಕಾರ್ಯಕ್ರಮ

0
10

ಲಯನ್ಸ್‌ ಜಿಲ್ಲೆ 317C ವತಿಯಿಂದ ಲಯನ್ಸ್‌ ಕ್ಲಬ್‌ ಬೆಳ್ಮಣ್‌, ಮುದರಂಗಡಿ ಮತ್ತು ಕಟಪಾಡಿಯ ಸಹಭಾಗಿತ್ವದಲ್ಲಿ ಮೂಳೂರಿನ AL-IHSAN Group of Educational Institutions DKSC, Muloor ಶಿಕ್ಷಣ ಸಂಸ್ಥೆಯಲ್ಲಿ 2 ದಿನಗಳ ಕಾಲ 30 ಶಿಕ್ಷಕರಿಗೆ ಶಿಕ್ಷಕರ ತರಬೇತಿ ಕಾರ್ಯಕ್ರಮ ಜರುಗಿತು.

ಲಯನ್‌ ಕವಿತಾ ಶಾಸ್ರ್ತಿ ಮತ್ತು ಡಾ. ನಾಗರಾಜ್‌ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಪ್ರಥಮ ಉಪ ಜಿಲ್ಲಾ ಗವರ್ನರ್‌ ಲಯನ್‌ ಹರಿಪ್ರಸಾದ್‌ ರೈ ಉದ್ಘಾಟಿಸಿದರು. ಜಿಲ್ಲಾ ಗವರ್ನರ್‌ ಲಯನ್‌ ರಾಜೀವ್‌ ಕೋಟ್ಯಾನ್‌ ಸಮಾರೋಪ ಸಮಾರಂಭದಲ್ಲಿ ಶಿಕ್ಷಕರಿಗೆ ಪದವಿ ಪ್ರಧಾನ ಮಾಡಿದರು.

ಮಾಜಿ ಜಿಲ್ಲಾ ಗವರ್ನರ್‌ ಲಯನ್‌ ಎನ್‌ ಎಮ್‌ ಹೆಗಡೆ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಹಲವಾರು ಲಯನ್ಸ್‌ ನಾಯಕರು ಉಪಸ್ಥಿತರಿದ್ದರು.