ಮೂಲ್ಕಿ: ಚಿತ್ರಾಪು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ 31ನೇ ವರ್ಷದ ನವರಾತ್ರಿ ಉತ್ಸವವು ಅ.11ರಿಂದ 13ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.11ರಂದು ಬೆಳಿಗ್ಗೆ ಶುದ್ಧಿ, ಪುಣ್ಯಾಹ, ಗಣಹೋಮ, ವಾಸ್ತುಬಲಿ, ಪಂಚಾಮೃತ ಅಭಿಷೇಕ ಹಾಗೂ ಕಲಶ ಸ್ಥಾಪನೆ ನಡೆಯಲಿದ್ದು, ಬಳಿಕ ತ್ರಿಕಾಲ ಪೂಜೆ ನೆರವೇರಲಿದೆ. ಅ.12ರಂದು ತ್ರಿಕಾಲ ಪೂಜೆ, ಕುಂಕುಮಾರ್ಚನೆ ಹಾಗೂ ಲಲಿತಾ ಪಾರಾಯಣ ನಡೆಯಲಿದೆ.
ಅ.13ರಂದು ಬೆಳಿಗ್ಗೆ ಅಲಂಕಾರ ಪೂಜೆ ಮತ್ತು ಭಜನೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಹೂವಿನ ಪೂಜೆ, ಪ್ರಾರ್ಥನೆ, ಸುವಾಸಿನಿ ಪೂಜೆ ಹಾಗೂ ರಕ್ಷಾ ನೂಲು ವಿತರಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ಶ್ರೀದೇವಿ ಆವೇಶದಲ್ಲಿ ಬಲಿ ಸೇವೆ ಹಾಗೂ ಜಳಕ ನಡೆಯಲಿದೆ. ಬಳಿಕ ಭಕ್ತರಿಗೆ ಶ್ರೀದೇವಿಯ ಅನುಗ್ರಹ ಮತ್ತು ಶ್ರೀಮುಡಿ ಗಂಧಪ್ರಸಾದ ವಿತರಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಅ.14ರಂದು ಬೆಳಿಗ್ಗೆ ಕಲಶ ವಿಸರ್ಜನೆ ನಡೆಯಲಿದೆ. ಬಳಿಕ ಅ.20ರವರೆಗೆ ನಿತ್ಯ ತ್ರಿಕಾಲ ಪೂಜೆ ಹಾಗೂ ರಾತ್ರಿ ನಿತ್ಯ ಭಜನೆಗಳು ನಡೆಯಲಿವೆ.
ಮೂಕಾಂಬಿಕಾ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀದೇವಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಕೇಶವಾನಂದ ಗುರೂಜಿ ಹಾಗೂ ಚಿತ್ರಾಪಿನ ಶ್ರೀಮತಿ ಭವಾನಿ ಅಮ್ಮನವರ ಮಕ್ಕಳು ಮತ್ತು ಮೊಮ್ಮಕ್ಕಳು, ಮುಂಬೈ ಹಾಗೂ ಊರ-ಪರಊರ ಭಕ್ತವೃಂದದ ಪರವಾಗಿ ವಿನಂತಿಸಲಾಗಿದೆ.

