ಲಯನ್ಸ್‌ ನಿಂದ ವಿಶ್ವ ಸೇವಾ ದಿನಾಚರಣೆ

0
11


ಕಾರ್ಕಳ: ಲಯನ್ಸ್‌ ಜಿಲ್ಲೆ 317C ಲಯನ್ಸ್‌ ನ 30 ಕ್ಕೂ ಹೆಚ್ಚು ಕ್ಲಬ್ ಗಳ ಪದಾದಿಕಾರಿಗಳೊಂದಿಗೆ ಅಕ್ಟೋಬರ್‌ 8, 2026 ರಂದು ಕಾರ್ಕಳದ ಬೈಲೂರು ಸಮೀಪದ ಹೊಸ ಬೆಳಕು ಸೇವಾಶ್ರಮದಲ್ಲಿ ವಿಶ್ವ ಸೇವಾಶ್ರಮದಲ್ಲಿ ವಿಶ್ವ ಸೇವಾ ದಿನಾಚರಣೆ ಒಂದು ಜಿಲ್ಲೆ ಒಂದು ಸೇವಾ ಯೋಜನೆ ಅಡಿಯಲ್ಲಿ ಆಶ್ರಮದ ನಿವಾಸಿಗಳಿಗೆ ಅಗತ್ಯ ವಸ್ತುಗಳ ಬಟ್ಟೆಗಳನ್ನು ನೀಡಿ ಆಚರಿಸಲಾಗುವುದೆಂದು ಮುಖ್ಯ ಸಂಯೋಜಕ ಲಯನ್‌ ಏಕನಾಥ ಬೋಳಾರ್‌ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಜಿಲ್ಲಾ ಗವರ್ನರ್‌ ಲಯನ್‌ ರಾಜೀವ್‌ ಕೋಟ್ಯಾನ್‌ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಪ ಜಿಲ್ಲಾ ಗವರ್ನರ್‌ ಆದ ಲಯನ್‌ ಹರಿಪ್ರಸಾದ್‌ ರೈ, ಲಯನ್‌ ರಮಾನಂದ ಕೆ, ಮಾಜಿ ಜಿಲ್ಲಾ ಗವರ್ನರ್‌ ಗಳಾದ ಲಯನ್‌ ಜಯಕರ ಶೆಟ್ಟಿ ಇಂದ್ರಾಳಿ, ಲಯನ್‌ ಎನ್‌ ಎಮ್‌ ಹೆಗಡೆ, ಸಂಪುಟದ ಹಿರಿಯ ಅಧ್ಯಕ್ಷರುಗಳಾದ ಲಯನ್‌ ಬಿ ಅರುಣ್‌ ಕುಮಾರ್‌ ಹೆಗಡೆ, ಲಯನ್‌ ದಿನಕರ ಶೆಟ್ಟಿ, ಲಯನ್‌ ರಜತ್‌ ಹೆಗಡೆ, ಇನ್ನಿತರರು ಭಾಗವಹಿಸುತ್ತಾರೆಂದು ಲಯನ್‌ ಏಕನಾಥ್‌ ಬೋಳಾರ್‌ ತಿಳಿಸಿರುತ್ತಾರೆ.