ಮುಂಬಯಿ :ಧಾರ್ಮಿಕ ಮತ್ತು ಸಾಮಾಜಿಕ ಸೇವೆಯ ಮೂಲಕ ಸಾಂತಾಕ್ರೂಜ್ ಪರಿಸರದಲ್ಲಿ ಜನಾನುರಾಗಿಗಳಾಗಿರುವ ಕುತ್ಯಾರ ಕರ್ಮಾರು ದಿಢ್ ಮನೆಯ ಶ್ರೀ ವಾಸುದೇವ ಬಂಜನ್ ಅವರು ಸ್ಥಾಪಿಸಿರುವ ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟಿರುವ ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ಅ.11 ರಿಂದ 19 ರವರೆಗೆ
ಆಶಾ ಚಾಲ್, ಮಿಲನ್ ಸಬ್ ವೇ ರಸ್ತೆ, ಸಾಂತಾಕ್ರೂಜ್ ಪೂರ್ವ ಇಲ್ಲಿ ಮಂತ್ರದೇವಿ ಅಮ್ಮನ ಸನ್ನಿಧಿಯಲ್ಲಿ 9 ದಿನಗಳ ಕಾಲ ವಿಶೇಷ ಪೂಜೆ, ಅಲಂಕಾರ, ಮಹಾ ಆರತಿ ಮತ್ತು ಪ್ರಸಾದ ವಿತರಣೆ ಜರಗಲಿದೆ.
ಮಂತ್ರಾದೇವಿ ಅಮ್ಮನಿಗೆ ದೈನಂದಿನ ಮಹಾ ಆರತಿ, ಪ್ರಸಾದ ವಿತರಣೆ, ಪ್ರತಿದಿನ ಮಹಾನವಮಿ ಹವನ – ಅಕ್ಟೋಬರ್ 19, ಸೋಮವಾರದಂದು ವಿಶೇಷ ಹವನ ನಡೆದು, ನಂತರ ಮಹಾ ಆರತಿ ಜರಗಲಿದೆ. ಪ್ರತಿದಿನ ಅನ್ನಪ್ರಸಾದ ನಡೆಯಲಿದೆ.
ಈ ಪವಿತ್ರ ನವರಾತ್ರಿ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಮಂತ್ರಾದೇವಿ ಅಮ್ಮನ ದರ್ಶನ ಪಡೆದು ಕೃತಾರ್ಥರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

