ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026 ಆಮಂತ್ರಣ ಪತ್ರಿಕೆ ಎಡನೀರು ಶ್ರೀ ಗಳಿಂದ ಬಿಡುಗಡೆ

0
5

ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ ಸಾರತ್ಯದ, “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ ಕಳೆದ 15ವರ್ಷಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ಆಯೋಜಿಸುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ “, ಕನ್ನಡ ಉಳಿಸುವ, ಬೆಳೆಸುವ ಹಾಗೂ ಜಗತ್ಪ್ರಸಿದ್ಧವಾದ ಕನ್ನಡ ಸಂಸ್ಕೃತಿಯನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಯಶಸ್ವಿಯನ್ನು ಕಂಡಿದೆ.

ಇದೇ ಮಾದರಿಯನ್ನು ನವರಾತ್ರಿ ಮಹೋತ್ಸವವನ್ನು ಆಚರಿಸುವ ಪ್ರತಿ ದೇವಸ್ಥಾನ, ಮಂದಿರ, ತರವಾಡು ಮನೆ, ಮಠಗಳು ಮಾಡಬೇಕಿದೆ. ಆಗ ನಮ್ಮ ಕಾಸರಗೋಡು ಕನ್ನಡ ನಾಡು ಎಂಬ ಯಥಾವತ್ ಅನಿಸಿಕೆಗೆ ಯುವಪೀಳಿಗೆ ಒಗ್ಗಿಕೊಳ್ಳುತ್ತಾರೆ, ನಮ್ಮ ಸಂಸ್ಕೃತಿಯೂ ಉಳಿಯುತ್ತದೆ, ಬೆಳೆಯುತ್ತದೆ. ಕನ್ನಡ ಭವನ ಈ ನಿಟ್ಟಿನಲ್ಲಿ ಜಾಗ್ರತೆ ವಹಿಸುವುದು ನಮಗೆ ಸಂತೋಷ ತಂದಿದೆ ಎಂದು ಶ್ರೀಮದ್ ಎಡನೀರು ಮಠ ಅದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026,ರ 10 ದಿನಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಅಕ್ಟೋಬರ್ 11ಕ್ಕೆ ಪ್ರಾರಂಭವಾಗುವ ದಸರಾ ಕಾರ್ಯಕ್ರಮಗಳನ್ನು ಎಡನೀರು ಶ್ರೀಗಳು ಉದ್ಘಾಟಿಸಲಿರುವರು. ಇದೇ ರೀತಿ ಕಾಸರಗೋಡು ದಸರಾ ಸಂಕೀರ್ತನ ದಶಾಹ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಭಜನಾ ಪರಿಷತ್ ತಾಲೂಕು ಅಧ್ಯಕ್ಷರಾದ ಡಾ. ಕೆ. ಏನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಲಿರುವರು. ಸುಮಾರು 28ಭಜನಾ ತಂಡಗಳು ದಶಾಹ.. ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ. ಭಾಗವಹಿಸುವ ಎಲ್ಲ ತಂಡ ಹಾಗೂ ಸದಸ್ಯರೀಗೆ “ಕಾಸರಗೋಡು ದಸರಾ ಸಾಧಕ ಸನ್ಮಾನ “ನೀಡಿ ಗೌರವಿಸಲಿದೆ.

ಕಾರ್ಯಕ್ರಮ ದಲ್ಲಿ ರಾಷ್ಟ್ರೀಯ ಮಟ್ಟದ ಕವಿಸಮ್ಮೇಳನ, ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ. ಸುಮಾರು 60 ಅಂತರ್ ರಾಜ್ಯ -ರಾಷ್ಟ್ರ ಮಟ್ಟದ ಕವಿಗಳು ಭಾಗವಹಿಸಲಿದ್ದಾರೆ. ಮೈಸೂರು ರಾಜ ವಂಶದ ಪ್ರಮುಖರಾದ ಡಾ. ಬಿ. ಶ್ರೀನಿವಾಸ ಬಹದೂರ್ ಸರ್ವಾಧ್ಯಕ್ಷತೆಯಲ್ಲಿ ಡಾ. ಎಮ್. ಜಿ. ಆರ್ ಅರಸ್ ಮೈಸೂರು ಉದ್ಘಾಟಿಸುವ ಕವಿ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಮೈಸೂರಿನ ಖ್ಯಾತ ಕವಿ ಸಾಹಿತಿ ಜಯಪ್ಪ ಹೊನ್ನಾಳಿ ವಹಿಸಲಿದ್ದಾರೆ.

ಗುರುರಾಜ್ ಕಾಸರಗೋಡು ನೇತೃತ್ವದಲ್ಲಿ ಕಲಾಮೇಳ ನಡೆಯಲಿದೆ. ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಕಲಾವಿದರ ಕಲವರ -ಶ್ರೀ ವಸಂತ ಬಾರಡ್ಕ ಇವರ ಶ್ರೀ ವಾರಿ ಮೆಲೋಡಿಸ್ ಇವರ “ಭಕ್ತಿ ರಸ ಮಂಜರಿ ” “ನಾಯಕರ ವೆಂಕಟ್ರಮಣಮಣಯ್ಯ ಸಂಸ್ಮರಣೆ, ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸಂಸ್ಮರಣೆ, ರಾಮಕ್ಷತ್ರಿಯ ಸಮಾಜ ನಡೆದು ಬಂದ ದಾರಿ “ವಿಚಾರ ಸಂಕಿರಣ, “ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ, “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ಪಯಸ್ವಿನಿ ಪ್ರಶಸ್ತಿ, ಗಳು ಕೇರಳ -ಕರ್ನಾಟಕದ ನೂರಾರು ಮಂದಿಗೆ ಲಭಿಸಲಿದೆ ಎಂದು ಕಾರ್ಯಕ್ರಮಗಳ ಬಗ್ಗೆ ಪ್ರದಾನ ಸಂಚಾಲಕರಾದ ವಾಮನ್ ರಾವ್ ಬೇಕಲ್ ಎಡನೀರು ಶ್ರೀಗಳಲ್ಲಿ ಮನವರಿಕೆ ಮಾಡಿದರು. ಈ ವೇಳೆ ಶ್ರೀಮಠಕ್ಕೆ ಹೊರೆಕಾಣಿಕೆ ಕನ್ನಡ ಭವನದಿಂದ ಸಮರ್ಪಸಿ ಅನುಗ್ರಹಕ್ಕೆ ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ, ಸಂಚಾಲಕರುಗಳಾದ ವಸಂತ್ ಕೆರೆಮನೆ, ಅಖಿಲೇಶ್ ನಗುಮುಖಮ್, ವಸಂತ ಭಾರಡ್ಕ, ಜಗನ್ನಾಥ್ ಶೆಟ್ಟಿ ಪಿ. ಕೆ., ಕೋಶಾಧಿಕಾರಿ ಸಂದ್ಯಾ