ಪ್ರಬಂಧ ಸ್ಪರ್ಧೆಯಲ್ಲಿ ಗಗನ್ಯಾ ತೃತೀಯ

0
16

ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಮತ್ತು ಕಾರ್ಕಳ ವನ್ಯಜೀವಿ ವಲಯ ಕಾರ್ಕಳ ಇವರು ನಡೆಸಿದ 72ನೇ ವನ್ಯಜೀವಿ ಸಪ್ತಾಹ 2026ರ ಅಂಗವಾಗಿ ವಲಯ

ಮಟ್ಟದಲ್ಲಿ ನಡೆಸಿದ ಪ್ರೌಢಶಾಲಾ ವಿಭಾಗ ಪ್ರಬಂಧ ಸ್ಪರ್ಧೆಯಲ್ಲಿ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ಗಗನ್ಯಾ ತೃತೀಯ ಸ್ಥಾನವನ್ನು ಗಳಿಸಿದ್ದಾಳೆ. ಇವಳನ್ನು ಕಾರ್ಕಳ ವನ್ಯಜೀವಿ ವಲಯದ ಅಧಿಕಾರಿ ಅಭಿನಂದನ್ ಆನಂದ ಹೆಗ್ಡೆ ಇವರು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅಮೃತ ಭಾರತಿ ವಿದ್ಯಾಲಯದ ಉಪಮುಖ್ಯಶಿಕ್ಷಕ ಮಹೇಶ್ ಹೈಕಾಡಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.