ಸಿದ್ಧಕಟ್ಟೆ: ಅ.17ರಿಂದ ದಸರಾ ಉತ್ಸವ

0
5

ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ವತಿಯಿಂದ ಅ.17ರಿಂದ 18ರತನಕ ಎಂಟನೇ ವರ್ಷದ ‘ಸಿದ್ಧಕಟ್ಟೆ ದಸರಾ ಉತ್ಸವ’ ಕಾರ್ಯಕ್ರಮ ನಡೆಯಲಿದೆ.

17ರಂದು ಬೆಳಿಗ್ಗೆ ಗಂಟೆ 8.30ಕ್ಕೆ ಮೆರವಣಿಗೆಯಲ್ಲಿ ಶಾರದಾ ಮೂರ್ತಿ ತಂದು 9.15ಕ್ಕೆ ಪ್ರತಿಷ್ಠೆ, 9.15ಕ್ಕೆ ದೀಪ ಪ್ರಜ್ವಲನೆ, 11 ಗಂಟೆಗೆ ಮಹಿಳಾ ಸಭಾ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ವಿಶೇಷ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, 1 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 7.30ಕ್ಕೆ ‘ಚಂದ್ರಾವತಿ’ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಅ.18ರಂದು ಬೆಳಿಗ್ಗೆ ಗಂಟೆ 8ರಿಂದ ಭಜನೆ, 9.30ಕ್ಕೆ ಅಕ್ಷರಾಭ್ಯಾಸ, 10.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 11 ಗಂಟೆಗೆ ಧಾರ್ಮಿಕ ಸಭೆ ಮತ್ತು ಸಾಧಕರಿಗೆ ಸನ್ಮಾನ, ಸಂಜೆ 4ಗಂಟೆಗೆ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.