ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಗೃಹಲಕ್ಷ್ಮಿ ಫಲಾನುಭವಿಗಳ ಸಮಾವೇಶ ಹಾಗೂ ಪಂಚ ಗ್ಯಾರಂಟಿ ಸಂಭ್ರಮೋತ್ಸವ

0
32

ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗಿ

ಪಡುಬಿದ್ರಿ : ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ಗೃಹಲಕ್ಷ್ಮಿ ಫಲಾನುಭವಿಗಳ ಸಮಾವೇಶ ಹಾಗೂ ಪಂಚ ಗ್ಯಾರಂಟಿ ಸಂಭ್ರಮೋತ್ಸವ ಕಾರ್ಯಕ್ರಮವು ಅಕ್ಟೋಬರ್ 10ರಂದು ಶನಿವಾರ ಬೆಳಗ್ಗೆ 10.30ಕ್ಕೆ ಪಡುಬಿದ್ರಿ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿನಯ್ ಕುಮಾರ್ ಸೊರಕೆ ನೆರವೇರಿಸಿದರು, ಅಧ್ಯಕ್ಷತೆಯನ್ನು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೀಝ್ ಹುಸೇನ್ ವಹಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳು ಹಾಗೂ ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ದೊರೆತಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ಸಭೆಯನ್ನುದ್ದೇಶಿಸಿ ಕಾಪು block ಕಾಂಗ್ರೆಸ್ ಅಧ್ಯಕ್ಷರಾದ ವೈ.ಸುಕುಮಾರ್ ಗ್ಯಾರಂಟಿ ಯೋಜನೆಯ ಸವಲತ್ತುಗಳು ಮಹಿಳೆಯರಿಗೆ ಮತ್ತು ಫಲಾನುಭವಿಗಳಿಗೆ ತಲುಪುವ ಕಾರ್ಯ ಮತ್ತು ಇದರ ಮಾಹಿತಿ ಸಮಾಲೋಚನೆಯ ಮೂಲಕ ಜನರಿಗೆ ತಿಳಿಸುವುದೇ ಈ ಕಾರ್ಯಕ್ರಮ ಉದ್ದೇಶ ಎಂದು ತಿಳಿಸಿದರು.

ಉಡುಪಿ ಚಿಕ್ಕಮಂಗಳೂರು ಲೋಕಸಭೆ ಕ್ಷೇತ್ರದ ಮಾಜಿ ಸಂಸದರು ಜಯಪ್ರಕಾಶ್ ಹೆಗ್ಡೆ ಮಾತನಾಡಿ ಕಾಂಗ್ರೆಸ್ ಸರ್ಕಾರ ಬಡವರ ಸರಕಾರ ಜನರಿಗೆ ಸ್ವಾತಂತ್ರ್ಯ ಪಡೆದ ಬಳಿಕ ಅನೇಕ ಸವಲತ್ತುಗಳನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.

ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು ಹಾಗೂ ಅಧ್ಯಕ್ಷರು ಕೆಪಿಸಿಸಿ ಪ್ರಚಾರ ಸಮಿತಿ ಅವರು ಬದುಕು ಕಟ್ಟುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿ ಕೊಟ್ಟಿದೆ ಮತ್ತು ಬಡವರ ಧ್ವನಿಯಾಗಿರುವ ಸರಕಾರ ಕಾಂಗ್ರೆಸ್ ಸರಕಾರ ಎಂದು ತಿಳಿಸಿದರು . ಮತ್ತು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್ ಐ ಆರ್ ಗೆ ದುಡಿದ ಬಿ ಎಲ್ ಒ ಗಳನ್ನು ಕಾರ್ಯಕ್ರಮದಲ್ಲಿ ಸನ್ಮಾಸಿ ಗರವಿಸಲಾಯಿತು.

ಪ್ರಮುಖ ಭಾಷಣಕಾರರಾಗಿ ನವೀನ್ ಚಂದ್ರ ಸುವರ್ಣ ಅಡ್ವೆ ಅಧ್ಯಕ್ಷರು ಕಾಪು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರು ಯೋಜನೆಯ ಬಗ್ಗೆ ಇರುವ ಗೊಂದಲಗಳನ್ನು ಸರಿಪಡಿಸಿ.ಗ್ಯಾರಂಟಿ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿದರು. ಕೇವಲ ಕಾಪು ತಾಲೂಕಿಗೆ ಕಳೆದ 3 ವರ್ಷದಿಂದ 394 ಕೋಟಿ ಅನುದಾನ ಬಂದಿರುತ್ತದೆ. ತಿಂಗಳಿಗೆ 10ರಿಂದ 11 ಕೋಟಿ ಅನುದಾನ ಬಂದಿದೆ ಹಾಗೂ ಎಲ್ಲಾ ವರ್ಗದವರಿಗೆ ಜೀವನ ಮಾಡಲು ಉತ್ತಮ ಅವಕಾಶ ಗೃಹಲಕ್ಷ್ಮಿ ಒದಗಿಸಿದೆ.

ಪಂಚ ಗ್ಯಾರಂಟಿಯ 6 ಯೋಜನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ನವೀನ್ ಚಂದ್ರ ಶೆಟ್ಟಿ ಹೇಳಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರರ ಸುಧೀರ್ ಕುಮಾರ್ ಮಾತನಾಡಿ… ಕಾಂಗ್ರೆಸ್ ಮತ್ತು ಬಿಜೆಪಿಯ ಯೋಜನೆಗಳ ಹೊಂದಾಣಿಕೆ ಮತ್ತು ಕಾಂಗ್ರೆಸ್ ಸರಕಾರದ ಪ್ರಯೋಜನ ಎಷ್ಟಾಗಿದೆ. ಅದರ ಕೀರ್ತಿ ಎಂತದು ಎಂದು ದಿಕ್ಸೂಚಿ ಭಾಷಣ ಮಾಡಿದರು. ನಂತರ ಬೂತ್ ಅಧ್ಯಕ್ಷರಿಗೆ ಮತ್ತು ಬೀ ಎಲ್ ಎ ಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇವರೆಲ್ಲರಿಗೂ ರಮೀಜ್ ಹುಸೇನ್ ಅವರು ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ ಎಲ್ಲರಿಗೂ ಅನ್ನ ಭಾಗ್ಯ ನೀಡಲಾಯಿತು. ಗ್ರಾಮೀಣ ಕಾಂಗ್ರೆಸ್‌ ನ ಕಾರ್ಯಾಲಯದಲ್ಲಿ ಶ್ರಮಿಸಿದ ಮಹನೀಯರನ್ನು ಗೌರವಿಸಲಾಯಿತು. ಗಾಯಕರಾದ ಸುಪ್ರಿಯಾ ಪನಿಯೂರು ಸಹನಾ ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಂತೋಷ ಕುಮಾರ್ ಹೆಜಮಾಡಿ ಧನ್ಯವಾದ ಸಮರ್ಪಿಸಿದರು. ರಾಜೇಶ್ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.