ಹಿರಿಯ ನಾಗರಿಕರ ಸಂಬಂಧಿಕರ ಪತ್ತೆಗಾಗಿ ಮನವಿ

0
8

ಅಸಹಾಯಕ ಸ್ಥಿತಿಯಲ್ಲಿದ್ದ ಹಿರಿಯ ನಾಗರಿಕರಾದ ಕಾಂತಪ್ಪ ಪೂಜಾರಿ ಅವರನ್ನು ನಿತ್ಯಾನಂದ ಒಳಕಾಡು ಅವರು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು ಇಲ್ಲಿ ದಾಖಲಿಸಿದ್ದು, ಈ ಕುರಿತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿರುತ್ತಾರೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಯವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಾಗರಿಕರೊಂದಿಗೆ ವಿಚಾರಿಸಿದಾಗ, ಅವರು ತಮ್ಮ ಹೆಸರು ಕಾಂತಪ್ಪ ಪೂಜಾರಿ, ತಂದೆಯ ಹೆಸರು ಪದ್ಮನಾಭ ಪೂಜಾರಿ ಎಂದು ತಿಳಿಸಿರುತ್ತಾರೆ. ತಮ್ಮ ವಿಳಾಸವನ್ನು 19-15, ಸಾಯಿ ಸನ್ನಿಧಿ, ಮಧ್ವನಗರ, ಮೂಡುಬೆಟ್ಟು, ಕೊಡವೂರು, ತೆಂಕನಿಡಿಯೂರು, ಉಡುಪಿ ಎಂದು ತಿಳಿಸಿರುತ್ತಾರೆ.

ಅಲ್ಲದೆ, ತಮ್ಮ ಪತ್ನಿ ಶಾರದಾ ಪೂಜಾರಿ ಅವರು ಇದೇ ವಿಳಾಸದಲ್ಲಿ ವಾಸವಾಗಿದ್ದು, ತಮ್ಮ ಮಗಳು ಮಲ್ಲಿಕಾ ಅವರು ದೆಹಲಿಯಲ್ಲಿ ವಾಸವಾಗಿರುವುದಾಗಿ ತಿಳಿಸಿರುತ್ತಾರೆ. ಆದರೆ, ಮಗಳ ವಿಳಾಸದ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿರುವುದಿಲ್ಲ.

ಸದರಿ ಹಿರಿಯ ನಾಗರಿಕರ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಿಗಾದರೂ ಇವರ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1090 ಅಥವಾ ದೂರವಾಣಿ ಸಂಖ್ಯೆ 0820-2526394 ಅನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ.