ಉಡುಪಿ : ನಗರದ ಸರ್ವಿಸ್ ಬಸ್ಸು ನಿಲ್ದಾಣದ ಬಳಿ, ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು.
ಬಳಿಕ ವಾರಸುದಾರರ ಪತ್ತೆಗೊಳಿಸಿ ಊರಾದ ಸಾಲಿಗ್ರಾಮಕ್ಕೆ ತಲುಪಿಸುವ ವ್ಯವಸ್ಥೆಗೊಳಿಸಿದರು. ಸಂಚಾರ ಪೋಲಿಸ್ ಠಾಣೆಯ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಮಾಲ್ತೇಶ್ ವೃದ್ಧರ ಅಸಹಾಯಕ ಪರಿಸ್ಥಿತಿ ಗಮನಿಸಿ ಒಳಕಾಡುವರ ಗಮನಕ್ಕೆ ತಂದಿದ್ದರು. ತಕ್ಷಣ ಅವರು ನೆರವಿಗೆ ಬಂದಿದ್ದರು.
ಮತ್ತೊಂದು ಘಟನೆಯಲ್ಲಿ ನಗರದ ಹಳೆ ಡಯಾನ ವೃತ್ತದ ಬಳಿ ಕುಸಿದುಬಿದ್ದು ಪ್ರಜ್ಞಾಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಈ ಬಗ್ಗೆ ಡಯಿನ ಸ್ಟೋರಿನ ಮಾಲೀಕರು ಒಳಕಾಡು ಅವರಿಗೆ ತಿಳಿಸಿದ್ದರು. ರೋಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದರಿಂದ ಹೆಸರು ವಿಳಾಸ ತಿಳಿದು ಬಂದಿಲ್ಲ. ವಾರಸುದಾರರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

