ಅಕ್ಷರ ರತ್ನ ಫೌಂಡೇಶನ್ ಪ್ರಧಾನ ಸಲಹಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ : ಸುರೇಖಾ ಚಂದ್ರಹಾಸ್ ಅಧ್ಯಕ್ಷರಾಗಿ ಆಯ್ಕೆ- ಶಿಕ್ಷಣ, ಸಮಾಜಸೇವೆಗೆ ಆದ್ಯತೆ

0
54

ಮಂಗಳೂರು : ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಅಕ್ಷರ ರತ್ನ ಫೌಂಡೇಶನ್ (ರಿ.), ಮಂಗಳೂರು ಇದರ ಪ್ರಧಾನ ಸಲಹಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಸಮಿತಿಯ ಅಧ್ಯಕ್ಷರಾಗಿ ಸುರೇಖಾ ಚಂದ್ರಹಾಸ್ ಹಾಗೂ ಕಾರ್ಯಾಧ್ಯಕ್ಷರಾಗಿ ಪುರುಷೋತ್ತಮ್ ಶೆಟ್ಟಿ ಪಿಲಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಯಂತ್ ಕೊಂಡಾಣ, ಭಾಸ್ಕರ್ ತೊಕ್ಕೊಟ್ಟು, ಗಣೇಶ್ ಕೊಲ್ಯ ಹಾಗೂ ನೆಲ್ಸನ್ ಬಗಂಬಿಲ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸುಕೇಶ್ ಮಂಜನಾಡಿ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ಜಯಂತ್ ಕೊಲ್ಯ, ಮನೋಹರ್ ಬೋಳಾರ್, ಸುನಿತಾ ಲೋಬೊ ಹಾಗೂ ಸುಕುಮಾರ್, ಜೊತೆ ಕಾರ್ಯದರ್ಶಿಗಳಾಗಿ ಮಲ್ಲಿಕಾ ಮನೋಜ್ ಮತ್ತು ಚಿರಂಜನ್, ಕೋಶಾಧಿಕಾರಿಯಾಗಿ ಜನಾರ್ಧನ ಕಾಯರ್ ಪಳಿಕೆ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸೌಮ್ಯ ಮಾಡ ಮತ್ತು ಸಮೀಕ್ಷ ಆಯ್ಕೆಯಾಗಿದ್ದಾರೆ.