
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಡಲ ಕೆರೆ-ಅಲಂಗಾರು ಪ್ರದೇಶದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ನಡೆಸುತ್ತಿರುವ ಡಿಬಿಎಲ್ ಸಂಸ್ಥೆಯವರು ನಡೆಸುತ್ತಿರುವ ಅಸಮರ್ಪಕ ಯೋಜನೆಗಳಿಂದಾಗಿ ಇಡೀ ಪ್ರದೇಶ ಕೊಳಚೆ ನೀರಿನ ಸಂಗ್ರಹಾಗಾರವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಹೆದ್ದಾರಿಯ ಮಾರ್ಗ ರಚನೆಯಿಂದಾಗಿ ಸರಾಗವಾಗಿ ಹೋಗುತ್ತಿದ್ದ ಒಳ ಚರಂಡಿ ವ್ಯವಸ್ಥೆಯ ಕೊಳಚೆ ನೀರು ಪ್ರಸ್ತುತ ಸೂಕ್ತ ವ್ಯವಸ್ಥೆ ಇಲ್ಲದೆ ತೆರೆದ ಪ್ರದೇಶದಲ್ಲಿ ಸಂಗ್ರಹಾಗಾರವಾಗಿ ಮಾರ್ಪಟ್ಟಿದೆ.
ಇದರಿಂದಾಗಿ ಪುರಸಭಾ ವ್ಯಾಪ್ತಿಯ ಕಡಲ ಕೆರೆಯ ಇಂಡಸ್ಟ್ರಿಯಲ್ ಸಂಪೂರ್ಣ ಏರಿಯಾ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿವರ್ತಿತವಾಗಿದೆ. ಇಡೀ ಪ್ರದೇಶ ಕೊಳೆತು ನಾರುವ ವಾತಾವರಣವಾಗಿದ್ದು, ಸೊಳ್ಳೆಗಳ ಕಡಿತವು ಉಚಿತವಾಗಿ ಲಭ್ಯವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿರುತ್ತಾರೆ.
