
ಉಡುಪಿ : ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ 9ನೇ ವರ್ಷದ ಉಡುಪಿ ದಾಂಡಿಯಾ ಕಾರ್ಯಕ್ರಮ ಅಕ್ಟೋಬರ್ 17 ಶನಿವಾರ ಸಾಯಂಕಾಲ 6 ಗಂಟೆಯಿಂದ ನಡೆಯಲಿದೆ. ಅತ್ಯುತ್ತಮ ಜೋಡಿ ನೃತ್ಯ, ಅತ್ಯುತ್ತಮ ವೇಷಭೂಷಣ, ಅತ್ಯುತ್ತಮ ಸಮೂಹ ನೃತ್ಯ, ಮಕ್ಕಳ ಅತ್ಯುತ್ತಮ ವೇಷಭೂಷಣ ಸ್ಪರ್ಧೆ ನಡೆಯಲಿದೆ.ಎಂದು ಯವ ಘಟಕ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆ ಯಾಗಿ ಅತ್ಯುತ್ತಮ ನವವಿವಾಹಿತ ಜೋಡಿ ನೃತ್ಯಕ್ಕೆ ವಿಶೇಷ ಬಹುಮಾನವಿದೆ. ಮೊದಲ ವಿವಾಹ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸದ ದಂಪತಿಗಳಿಗೆ ಮಾತ್ರ ಈ ವಿಭಾಗದಲ್ಲಿ ಅವಕಾಶ ಇದೆ.
ಈ ಕಾರ್ಯಕ್ರಮದಲ್ಲಿ 2025ರಲ್ಲಿ ವಿಶ್ವ ಚಾಂಪಿಯನ್ ಭಾರತದ ಮಹಿಳಾ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಧನಲಕ್ಷ್ಮೀ ಪೂಜಾರಿ, ಕನ್ನಡ ಚಲನಚಿತ್ರದ ಅಭಿನಯಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಾದ ರೂಪಶ್ರೀ ವರ್ಕಾಡಿ,ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಭರತನಾಟ್ಯದಲ್ಲಿ ವಿಶ್ವ ದಾಖಲೆ ಮಾಡಿದ್ಧ ವಿದುಷಿ ದೀಕ್ಷಾರೊಂದಿಗೆ ಹಲವಾರು ತುಳು ಚಲನಚಿತ್ರ ನಟರು ಇವರೆಲ್ಲರೂ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮೈದಾನದಲ್ಲಿ ವಿಶಿಷ್ಟ ರೀತಿಯ ಅಲಂಕಾರ ಗೊಳ್ಳಲಿದ್ದು, ಆಹಾರ ಮಳಿಗೆ, ಮತ್ತು ವಿಶೇಷ ಸುಡು ಮದ್ದು ಪ್ರದರ್ಶನ ನಡೆಯಲಿದೆ, ಎಂದು ಯುವ ಘಟಕದ ಗೌರವಾಧ್ಯಕ್ಷರಾದ ಅಶ್ವತ್ ದೇವಾಡಿಗ ಕಡಿಯಾಳಿ ತಿಳಿಸಿರುತ್ತಾರೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶ
ಕಾರ್ಯಕ್ರಮಕ್ಕೆ ಮತ್ತು ನೃತ್ಯಕ್ಕೆ ಆಗಮಿಸುವ ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೇಯಸ್ ದೇವಾಡಿಗ ಕಡಿಯಾಳಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಯುವ ಘಟಕದ ಕೋಶಾಧಿಕಾರಿ ವಿಘ್ನೇಶ್ ಪ್ರಭು, ವಿವೇಕ್ ಕಾಮತ ಉಪಸ್ಥಿತರಿದ್ದರು.
